ಮಂಗಳೂರು: ಅಂತರ್‌ರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆ

ಮಂಗಳೂರು, ಸೆ.20: ಚೆನ್ನೈನ ಭಾರತ ಸರಕಾರದ ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರದ ಸೂಚನೆಯಂತೆ ಮೀನುಗಾರಿಕಾ ಮಹಾವಿದ್ಯಾಲಯದ ವತಿಯಿಂದ ಸೋಮೇಶ್ವರ ಕಡಲ ತೀರದಲ್ಲಿ ಶನಿವಾರ ಅಂತರ್‌ರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ಆಚರಿಸಲಾಯಿತು.
ಮೀನುಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವೃಂದ, ರಾಷ್ಟ್ರೀಯ ಸೇವಾ ಯೋಜನೆ, ಅರೇಬಿಯನ್ ಸಮುದ್ರ ಮೀನುಗಾರಿಕೆ ನಿರ್ವಹಣಾ ಸಮನ್ವಯ ಸಮಿತಿ (ಖಉಅ=ಇ2) ಮತ್ತು ಪುರಸಭೆ ಸೋಮೇಶ್ವರ ವೃಂದದಿಂದ ಉಳ್ಳಾಲ ಸೋಮೇಶ್ವರ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾ ಯಿತು. ಕಾರ್ಯಕ್ರಮದ ಅತಿಥಿಗಳಾಗಿ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಮತ್ತು ಸೋಮನಾಥ ದೇವಾಲಯದ ವ್ಯವಸ್ಥಾಪನಾ ಸದಸ್ಯ ಭಾಸ್ಕರ್‌ಗಟ್ಟಿ ಹಾಗೂ ಗೌರವ ಅತಿಥಿಗಳಾಗಿ ಅರೇಬಿಯನ್ ಸಮುದ್ರ ಮೀನುಗಾರಿಕೆ ನಿರ್ವಹಣಾ ಸಮನ್ವಯ ಸಮಿತಿ ಪ್ರಧಾನ ನಿರ್ದೇಶಕ ಡಾ. ಶಿವಕುಮಾರ ಮಗದ ಮಾತನಾಡಿದರು. ಮೀನುಗಾರಿಕಾ ವಿಭಾಗದ ಹೆಡ್‌ಆಫ್ ಡಿವಿಶನ್(ಮೀನುಗಾರಿಕೆ) ಡಾ. ಎಸ್. ವರದರಾಜು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಹಾಗೂ ಪರಿಸರದ ಪ್ರಾಮುಖ್ಯತೆಯನ್ನು ತಿಳಿಸಲು ಸ್ವಚ್ಛತಾ ಅಭಿಯಾನವನ್ನು ನಡೆಸಿದರು. ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹೆಚ್. ಎನ್. ಆಂಜನೇಯಪ್ಪ ಡಾ. ಎಸ್. ವರದರಾಜು ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದ ಸಂಯೋಜಕ ಡಾ.ಎಸ್. ಆರ್. ಸೋಮಶೇಖರ, ಹಿರಿಯ ಪ್ರಾಧ್ಯಾಪಕ ಡಾ.ಪ್ರದೀಪ್‌ಎಲ್. ದೊಡ್ಡಮನಿ, ಸಹಾಯಕ ಪ್ರಾಧ್ಯಾಪಕ ಡಾ. ಮಧು, ಡಿ. ಎಮ್. ಉಪಸ್ಥಿತರಿದ್ದರು.





