ಮಾದಕ ವಸ್ತು ಸೇವನೆ ಆರೋಪ: ನಾಲ್ವರ ಸೆರೆ

ಮಂಗಳೂರು, ಸೆ.20: ಉರ್ವ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವಿಸಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
*ಕೋಡಿಕಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕಲ್ಬಾವಿ ನಿವಾಸಿ ಪ್ರೀತಮ್ (33) ಹಾಗೂ ಕೊಟ್ಟಾರ ಚೌಕಿ ಮೇಲ್ಸೇತುವೆ ಬಳಿ ಬಿಜೈ ನಿವಾಸಿ ಅಖಿಲ್ ಸನ್ನಿ (24) ಮತ್ತು ಕೋಟೆಕಾರು ನಿವಾಸಿ ರಿತೇಶ್ (24) ಎಂಬವರನ್ನು ಉರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
*ನೀರುಮಾರ್ಗ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದ ಮೇರೆಗೆ ಪುದು ಗ್ರಾಮದ ಅಮ್ಮೆಮಾರ್ ಹೌಸ್ ನಿವಾಸಿ ಮುಹಮ್ಮದ್ ಅಶ್ರಫ್ ಯಾನೆ ಚೋಚಾ ಅಶ್ರಫ್ (42) ಎಂಬಾತನನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Next Story





