ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಮಂಗಳೂರು: ಆನ್‌ಲೈನ್ ಟಾಸ್ಕ್ ಮೂಲಕ ಪಾರ್ಟ್ ಟೈಮ್ ಕೆಲಸಕ್ಕೆ ಸಂಬಂಧಿಸಿ ಬಂದ ಮೆಸೇಜ್ ನಂಬಿ ವ್ಯಕ್ತಿಯೊಬ್ಬರು 10,99,426 ರೂ.ವನ್ನು ಖಾತೆಯಿಂದ ಕಳೆದುಕೊಂಡಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರ್ಟ್ ಟೈಮ್ ಕೆಲಸದ ಬಗ್ಗೆ ವಾಟ್ಸ್ ಆ್ಯಪ್‌ನಲ್ಲಿ ಬಂದಿದ್ದ ಮೆಸೇಜ್‌ಗೆ ತಾನು ಸ್ಪಂದಿಸಿದ್ದೆ. ಬಳಿಕ ಅಪರಿಚಿತರು ತನ್ನನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದ್ದರು. ಹಾಗೇ ಟೆಲಿಗ್ರಾಮ್‌ನಲ್ಲಿ ಅವರು ಸೂಚಿಸಿದ ಟಾಸ್ಕ್‌ಗಳನ್ನು ಮಾಡಿದ್ದು, ಆರಂಭದಲ್ಲಿ ಟಾಸ್ಕ್ ಗಳಿಗೆ ಖಾತೆಗೆ ಹಣ ಜಮಾ ಮಾಡಿದ್ದಾರೆ. ಒಳಿಕ ಹಂತ ಹಂತವಾಗಿ ಮಾ.24ರಿಂದ ಸೆ.5ರವರೆಗೆ 10,99,426 ರೂ.ವನ್ನು ಅವರ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಹಣ ಕಳ ಕೊಂಡ ವ್ಯಕ್ತಿ ಉರ್ವ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





