ಡಿಕೆಎಸ್‌ಸಿ ವತಿಯಿಂದ 'ನೂರೇ ಮದೀನ' ಮೀಲಾದ್ ಕಾನ್ಫರೆನ್ಸ್

ದೇರಳಕಟ್ಟೆ : ದಕ್ಷಿಣ ಕನ್ನಡ ಸುನ್ನೀ ಸೆಂಟರ್ ದೇರಳಕಟ್ಟೆ ಯುನಿಟ್ ಇದರ ಆಶ್ರಯದಲ್ಲಿ' ನೂರೇ ಮದೀನ' ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮ ದೇರಳಕಟ್ಟೆ ಖಾಸಗಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಈ ಕಾರ್ಯಕ್ರಮ ಪ್ರಯುಕ್ತ ಮೌಲಿದ್ ಮತ್ತು ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಸಲಾಯಿತು.
ಡಿಕೆ ಎಸ್ ಸಿ ಜಿಲ್ಲಾಧ್ಯಕ್ಷ ಸೆಯ್ಯಿದ್ ಮುಕ್ತಾರ್ ತಂಙಳ್ ಮೌಲಿದ್ ಮತ್ತು ಬುರ್ದಾ ಮಜ್ಲಿಸ್ ನ ನೇತೃತ್ವ ವಹಿಸಿದ್ದರು. ದೇರಳಕಟ್ಟೆ ಯುನಿಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕಿನ್ಯ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮ ದಲ್ಲಿ , ಡಿಕೆಎಸ್ ಸಿ ಕೇಂದ್ರ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಆರ್ ಎಮ್ ಎಕ್ಸ್, ಅಬ್ಬಾಸ್ ಹಾಜಿ ಎಲಿಮೆಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಬಳ್ಕುಂಜೆ, ಮುಳೂರು ಅಲ್ ಇಹ್ಸಾನ್ ಮಸೀದಿ ಖತೀಬ್ ಅಬ್ದುಲ್ ಹಮೀದ್ ಅಹ್ಸನಿ ಅಲ್ ಫಾಳಿಲಿ,ಮರ್ಕಝ್ ವ್ಯವಸ್ಥಾಪಕ ಸಿದ್ದೀಕ್ ಸ ಅದಿ, ಡಿಕೆ ಎಸ್ ಸಿ ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜೆಮಾರ್, ಮಂಗಳೂರು ಘಟಕ ಸದಸ್ಯ ಇಸ್ಹಾಕ್ ಬೊಳ್ಳಾಯಿ, ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಹುಸೈನ್ ಹಾಫಿಝ್ ಶಿಹಾಬುದ್ದೀನ್ ಸಖಾಫಿ, ಅಬ್ದುಲ್ ಜಮಾಲ್ ಸ ಅದಿ,ಹಾಜಿ ಕಿನ್ಯ, ಮೊಹಮ್ಮದ್ ಉಸ್ತಾದ್, ಮೆಹಬೂಬ್ ಸಖಾಫಿ, ಕೆ.ಇ.ಸಾಲೆತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಡಿಕೆ ಎಸ್ ಸಿ ದೇರಳಕಟ್ಟೆ ಯುನಿಟ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ದೇರಳಕಟ್ಟೆ ಸ್ವಾಗತಿಸಿದರು.







