ಮಂಗಳೂರು: ಕಣ್ಣಿನ ಉಚಿತ ತಪಾಸಣಾ ಶಿಬಿರ

ಮಂಗಳೂರು, ಸೆ.22: ಎ.ಜೆ ಆಸ್ಪತ್ರೆ ಮಹಾವಿದ್ಯಾಲಯ ಕಣ್ಣಿನ ವಿಭಾಗದ ವತಿಯಿಂದ ನಗರದ ಜೆಪ್ಪು ಸೈಂಟ್ ಜೋಸೆಫ್ ಸೆಂಟನರಿ ಮೆಮೊರಿಯಲ್ ಹಾಲ್‌ನಲ್ಲಿ ಬೃಹತ್ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು.
ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಐವನ್ ಡಿ ಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಅಧಿಕ ಮಂದಿ ಕಣ್ಣಿನ ಪರಿಕ್ಷೆಯನ್ನು ಮಾಡಿಕೊಂಡರು. 100ಕ್ಕೂ ಅಧಿಕ ಮಂದಿಯನ್ನು ಶಸ್ತ್ರಚಿಕಿತ್ಸೆಗಾಗಿ ನೊಂದಾಯಿಸಿಕೊಳ್ಳಲಾಯಿತು. 500ಕ್ಕೂ ಅಧಿಕ ಮಂದಿಗೆ ಕನ್ನಡಕ ವಿತರಣೆಗೆ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎ.ಜೆ ಆಸ್ಪತ್ರೆ ಮಹಾವಿದ್ಯಾಲಯಕಣ್ಣಿನ ವಿಭಾಗದ ಮುಖ್ಯಸ್ಥೆ ಡಾ. ರಂಜಿನಿ , ಡಾ.ರಜಿನಿ, ಡಾ.ಅಜಯ್ ಡಾ. ಆಕಾಂಶ ಡಾ. ತಂತ್ರಿ , ಉಪಾಧ್ಯಕ್ಷ ಸಿರಿಲ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
Next Story





