ತಾಂತ್ರಿಕ ಸಮಸ್ಯೆ: ದ.ಕ. ಜಿಲ್ಲೆಯಲ್ಲಿ ನಡೆಯದ ಸಮೀಕ್ಷೆ
ಮಂಗಳೂರು: ರಾಜ್ಯ ಸರಕಾರದ ನಿರ್ದೇಶನದಂತೆ ಸೋಮವಾರದಿಂದ ಆರಂಭಗೊಳ್ಳಬೇಕಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ತಾಂತ್ರಿಕ ಸಮಸ್ಯೆಯಿಂದ ದ.ಕ.ಜಿಲ್ಲೆಯಲ್ಲಿ ನಡೆದಿಲ್ಲ ಎಂದು ತಿಳಿದು ಬಂದಿದೆ.
ಸಮೀಕ್ಷೆಗೆ ಸಿದ್ಧಪಡಿಸಲಾಗಿದ್ದ ಮೊಬೈಲ್ ಆ್ಯಪ್ ಸೋಮವಾರ ಕೈಕೊಟ್ಟಿದೆ. ಗಣತಿ ಕೆಲಸಕ್ಕೆ ನಿಯೋಜನೆಗೊಂಡ ಸಿಬ್ಬಂದಿ ವರ್ಗವು ಸೋಮವಾರ ಕ್ಷೇತ್ರ ಭೇಟಿಗೆ ಹೋಗಿಲ್ಲ ಎನ್ನಲಾಗಿದೆ. ಈ ಮಧ್ಯೆ ಸಮೀಕ್ಷೆಗೆ ನೇಮಕಗೊಂಡ ಸಿಬ್ಬಂದಿಗಳಿಗೆ ಕಿಟ್ ವಿತರಣೆ ಕಾರ್ಯ ನಡೆದಿದೆ. ತಾಂತ್ರಿಕ ಸಮಸ್ಯೆ ನಿವಾರಣೆಯಾದರೆ ಮಂಗಳವಾರದಿಂದ ಸಮೀಕ್ಷೆ ನಡೆಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತಾಂತ್ರಿಕ ಸಮಸ್ಯೆಯಿಂದ ಸೋಮವಾರ ಸಮೀಕ್ಷೆ ಕಾರ್ಯ ನಡೆದಿಲ್ಲ. ಮಂಗಳವಾರದಿಂದ ಸಮಪರ್ಕವಾಗಿ ನಡೆಯಬಹುದು ಎಂದು ದ.ಕ. ಅಪರ ಜಿಲ್ಲಾಧಿಕಾರಿ ಕೆ. ರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Next Story





