ವಸಂತ ಮಾಧವರು ಸಂಶೋಧನಾ ಶೀಲ ಇತಿಹಾಸಜ್ಞರು: ಪುಂಡಿಕಾಯ್ ಗಣಪಯ್ಯ ಭಟ್

ಮಂಗಳೂರು: ಡಾ.ವಸಂತ ಮಾಧವರು ತುಳುನಾಡಿನ ಜನಜೀವನದ ಅನೇಕ ಮಜಲುಗಳನ್ನು ಸಂಶೋಧನಾ ತ್ಮಕವಾಗಿ ಅರಿತುಕೊಂಡಿದ್ದ ಅಪರೂಪದ ಇತಿಹಾಸಜ್ಞರಾಗಿದ್ದರು ಎಂದು ಪ್ರೊ.ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು.
ಕಲ್ಕೂರ ಪ್ರತಿಷ್ಠಾನ ನಗರದಲ್ಲಿ ಆಯೋಜಿಸಿದ್ದ ಡಾ.ವಸಂತ ಮಾಧವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ದಲ್ಲಿ ಅವರು ನುಡಿನಮನ ಸಲ್ಲಿಸಿದರು.
ಆಧಾರ ರಹಿತವಾಗಿ ಅವರು ಯಾವತ್ತೂ ಕೃತಿಗಳನ್ನು ರಚಿಸಿದವರಲ್ಲ. ಅಂತಹ ಪರಿಪಕ್ವ ಇತಿಹಾಸ ತಜ್ಞರು ಬಹಳ ವಿರಳ ಎಂದುಪ್ರೊ.ಪುಂಡಿಕಾಯ್ ಗಣಪಯ್ಯ ಭಟ್ ನುಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಡಾ.ಸತೀಶ್ ಕುಮಾರ್ ಶೆಟ್ಟಿ ಪಿ., ಡಾ.ಹರಿಕೃಷ್ಣ ಪುನರೂರು, ಡಾ. ಎಂ.ಪ್ರಭಾಕರ ಜೋಶಿ, ಜಿ.ಕೆ. ಭಟ್ ಸೇರಾಜೆ, ಮನೋರಂಜನ ರಾವ್, ಸುಧಾಕರ ರಾವ್ ಪೇಜಾವರ, ಚಂದ್ರಶೇಖರ ಮಯ್ಯ, ಉಮೇಶ್ ಕೆ.ಆರ್, ಡಾ.ಮಂಜುಳಾ ಶೆಟ್ಟಿ, ವಿಜಯಲಕ್ಷ್ಮಿ ಬಿ.ಶೆಟ್ಟಿ, ಮಾಲತಿ ಶೆಟ್ಟಿ ಮಾಣೂರು, ರಾಜೇಶ್ವರಿ ಕುಡುಪು, ಜಾನ್ ಚಂದ್ರನ್, ಬಿ.ಎಂ. ರಫೀಕ್ ತುಂಬೆ, ಸುಮಾ ಅರುಣ್ ಮಾನ್ವಿ, ಬಾಲಕೃಷ್ಣ ಪುಷ್ಪಾರ್ಚನೆ ಸಲ್ಲಿಸಿದರು.





