ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ರಿಕ್ಷಾ ಚಾಲಕನಿಗೆ ದಂಡ

ಮಂಗಳೂರು, ಸೆ.25: ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪರಿಸಿದ ಆರೋಪದ ಮೇಲೆ ಅಟೋ ಚಾಲಕನಿಗೆ ದಂಡ ವಿಧಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಸೆ.24ರಂದು ರಾತ್ರಿ 9:30ಕ್ಕೆ ಅಟೋ ಚಾಲಕ ಶೈಲೇಶ್ (28) ಎಂಬಾತ ಕುದ್ರೋಳಿ ದೇವಸ್ಥಾನದ ಮುಖ್ಯದ್ವಾರದ ಸಾರ್ವಜನಿಕ ರಸ್ತೆಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಸಿಬ್ಬಂದಿಯು ಕಾನೂನು ಉಲ್ಲಂಘನೆ ನೋಟಿಸು ದಾಖಲು ಮಾಡಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೈಲೇಶ್ ವಾಗ್ವಾದ ನಡೆಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಬಳಿಕ ಆಟೊ ಚಾಲಕ ಶೈಲೇಶ್ ಕ್ಷಮೆ ಯಾಚಿಸಿ ದ್ದಾನೆ. ಚಾಲಕನ ವಿರುದ್ಧ ಐಎಂವಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





