ಕಾರ್ಕಳ ನಿವಾಸಿ ಹೃದಯಾಘಾತದಿಂದ ಮಸ್ಕತ್‍ನಲ್ಲಿ ನಿಧನ

ಪಡುಬಿದ್ರಿ: ಇಲ್ಲಿನ ಕಾರ್ಕಳ ರಸ್ತೆಯ ಎಫ್ ಕೆ ಸರ್ವೀಸ್ ಸ್ಟೇಶನ್ ಬಳಿಯ ನಿವಾಸಿ ಸಯ್ಯದ್ ಶಮೀಮ್ (53) ಹೃದಯಾಘಾತದಿಂದ ಮಸ್ಕತ್‍ನಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದರು.
ಮಸ್ಕತ್‍ನಲ್ಲಿ ವಾಚ್ ಅಂಗಡಿ ನಡೆಸುತಿದ್ದರು. ಪತ್ನಿ, ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅನಿವಾಸಿ ಭಾರತೀಯ ಸಂಘಟನೆಗಳು ಮೃತದೇಹವನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು, ಶುಕ್ರವಾರ ಸಂಜೆ ಪಡುಬಿದ್ರಿಗೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





