ಎನ್‌ಐಟಿಕೆಯಲ್ಲಿ ‘ ದಿ ಇಂಜಿನಿಯರ್’ ತಾಂತ್ರಿಕ ಉತ್ಸವಕ್ಕೆ ಚಾಲನೆ

ಮಂಗಳೂರು, ಸೆ.26: ಸುರತ್ಕಲ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ ಕರ್ನಾಟಕ ಇದರ ಮೂರು ದಿನಗಳ ವಾರ್ಷಿಕ ತಾಂತ್ರಿಕ ಉತ್ಸವ ‘ ದಿ ಎಂಜಿನಿಯರ್ -2025’ ಕ್ಕೆ ಶುಕ್ರವಾರ ಸಂಜೆ ಎನ್‌ಐಟಿಕೆ ಸುರತ್ಕಲ್ ಕ್ಯಾಂಸ್‌ನಲ್ಲಿ ಆರಂಭಗೊಂಡಿತು.
ಮಂಗಳೂರಿನ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ನಿಜವಾದ ಪ್ರತಿಭೆಯನ್ನು ಪ್ರದರ್ಶಿಸಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನಿಜವಾಗಿಯೂ ಇಷ್ಟಪಡುವದನ್ನು ಅನುಸರಿಸಲು ಒಂದು ವೇದಿಕೆಯನ್ನು ನೀಡುತ್ತವೆ ಎಂದರು.
ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಡೀನ್ (ವಿದ್ಯಾರ್ಥಿ ಕಲ್ಯಾಣ) ಪ್ರೊ.ಮಂಡೇಲಾ ಗೋವಿಂದ ರಾಜ್ ಮತ್ತು ಪ್ರಭಾರ ಪ್ರಾಧ್ಯಾಪಕ ಡಾ. ಶಶಿಭೂಷಣ್ ಆರ್ಯ ಉಪಸ್ಥಿತರಿದ್ದರು.
ಸೆಪ್ಟೆಂಬರ್ 28 ರವರೆಗೆ ನಡೆಯಲಿರುವ ಈ ಮೂರು ದಿನಗಳ ನಾವೀನ್ಯತೆ ಮತ್ತು ತಂತ್ರಜ್ಞಾನದ ಉತ್ಸವವು 25,000 ಕ್ಕೂ ಹೆಚ್ಚು ಸಂದರ್ಶಕರನ್ನು ಆಕರ್ಷಿಸುವ ನಿರೀಕ್ಷೆಯಿದೆ ಮತ್ತು ವೈವಿಧ್ಯಮಯ ತಾಂತ್ರಿಕ ಕ್ಷೇತ್ರಗಳನ್ನು ಒಳಗೊಂಡಂತೆ 30ಕ್ಕೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹ್ಯಾಕಥಾನ್, ಆಟೋ ಎಕ್ಸ್‌ಪೊ, ಗೇಮಿಂಗ್ ಅರೆನಾ, ಟೆಕ್‌ನೈಟ್ಸ್ ಪ್ರಾಜೆಕ್ಟ್‌ಗಳು, ರೋಬೋಕಾನ್ಸ್ ಎಕ್ಸ್‌ಪೋ, ಟ್ರೋನಿಕ್ಸ್ ಡ್ರೋನ್ ರೇಸಿಂಗ್, ವರ್ಚುವಲ್ ಸ್ಕೈ ಟೂರ್, ಎಂಜಿ ಟಾಕ್ಸ್, ಎಸಿಎಂಆರ್ ಎಕ್ಸ್ಪೊ, ಟೆಕ್ ಮೇಳ ಮತ್ತು ಬಹುನಿರೀಕ್ಷಿತ ಪ್ರೊ ಶೋ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.







