ಉಳ್ಳಾಲ: ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ ವಿತರಣೆ

ಉಳ್ಳಾಲ: ಇಸ್ಲಾಮ್ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದೆ. ಇದರ ಮಹತ್ವ ಅರಿಯಬೇಕಾದದು ನಮ್ಮ ಜವಾಬ್ದಾರಿ ಆಗಿದೆ ಎಂದು ಬ್ಯಾರೀಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಅಬ್ದುಲ್ ಲತೀಫ್ ಬಿ.ಕೆ. ಹೇಳಿದರು.
ಅವರು ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ಕರ್ನಾಟಕ ,ಉಳ್ಳಾಲ ಸೆಂಟರ್ ಇದರ ಆಶ್ರಯದಲ್ಲಿ ಬಬ್ಬುಕಟ್ಟೆ ಇರಾ ಕಾಲೇಜು ಸಭಾಂಗಣದಲ್ಲಿ ನಡೆದ 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ, ಲೌಕಿಕ ಶಿಕ್ಷಣ ಇದ್ದರೆ ಮಾತ್ರ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಾದ್ಯ ಎಂದರು.
ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್, ಕರ್ನಾಟಕ ಇದರ ಕಾರ್ಯದರ್ಶಿ, ರಿಯಾಝ್ ಅಹ್ಮದ್ ರೋಣ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ನ ಅಧೀನದಲ್ಲಿ ದೂರ ಶಿಕ್ಷಣ ಪಡೆದು ತೇರ್ಗಡೆ ಹೊಂದಿದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.ಪ್ರಥಮ ರ್ಯಾಂಕ್ ಪಡೆದ ಶಮಾ ಫಾತಿಮಾ ಹಾಗೂ ಐದು ವರ್ಷಗಳ ಕೋರ್ಸ್ ಪೂರ್ಣ ಗೊಳಿಸಿದ ಆಯಿಷಾ ಫಾತಿಮಾ ಅವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಆರೋಗ್ಯ ಮತ್ತು ಸ್ವಚ್ಛತಾ ನಿರೀಕ್ಷಕಿ, ಆಯಿಶಾ ಪೆರ್ನೆ, ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ.ಎಚ್. ಮೆಹಮೂದ್ , ಅಲ್ ಪುರ್ಖಾನ್ ಅರೆಬಿಕ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಇಸ್ಹಾಕ್ ಹಸನ್, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಇಲ್ಯಾಸ್ ಇಸ್ಮಾಯಿಲ್, ಉದ್ಯಮಿ ಮೆಹಫೂಝ್ ರಹ್ಮಾನ್, ಎಸ್ ಐಒ ಅಧ್ಯಕ್ಷ ಮೊಹಮ್ಮದ್ ಅರ್ಫ್, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಝರೀನ, ಜಿಐಒ ಅಧ್ಯಕ್ಷೆ ಅಹ್ಸಾನ ಮತ್ತಿತರರು ಉಪಸ್ಥಿತರಿದ್ದರು.
ಮೊಹಮ್ಮದ್ ಮುಬೀನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ಅಹ್ಮದ್, ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರವೂಫ್ ವಂದಿಸಿದರು.







