ಬಜಾಲ್ ಸೈಂಟ್ ವಿನ್ಸೆಂಟ್ ಡಿಪಾವ್ಲ್ ಸಂಸ್ಥೆಯ ವಾರ್ಷಿಕೋತ್ಸವ

ಮಂಗಳೂರು: ನಗರದ ಬಜಾಲ್‌ನ ಸೈಂಟ್ ವಿನ್ಸೆಂಟ್ ಡಿಪಾವ್ಲ್ ಸಂಸ್ಥೆಯ 65ನೇ ವಾರ್ಷಿಕೋತ್ಸವನ್ನು ರವಿವಾರ ಆಚರಿಸಲಾಯಿತು. ಸಂಸ್ಥೆಯ ಕೇಂದ್ರಿಯ ಸಮಿತಿಯ ಧರ್ಮಗುರು ವಂ. ಫಾ. ಫ್ಲೇವಿಯನ್ ರಾಜ್ ಕಿರಣ್ ಲೋಬೊ ಬಲಿಪೂಜೆ ನೇರವೇರಿಸಿದರು.
ಬಜಾಲ್ ಚರ್ಚಿನ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಚರ್ಚಿನ ಧರ್ಮಗುರು ವಂ.ಫಾ.ವಿಲಿಯಂ ಲಿಯೋ ಲೋಬೊ ಉದ್ಘಾಟಿಸಿದರು.
ಅತಿಥಿಯಾಗಿ ಎಸ್‌ಎಸ್‌ವಿಪಿ ಸಿಟಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ರಿಚರ್ಡ್ ಪಿಂಟೊ, ನಿವೃತ್ತ ಧರ್ಮಗುರು ಫಾ. ರಿಚರ್ಡ್ ಸಲ್ಡಾನ, ದಾನಿಗಳಾದ ಹೆರಾಲ್ಡ್ ಡಿಸೋಜ, ಸಂತೋಷ್ ಸೀಕ್ವೇರಾ, ಸೈಂಟ್ ತೆರೆಝಾ ಕಾನ್ವೆಂಟಿನ ಶಾಲಾ ಪ್ರಾಂಶುಪಾಲ ಸಿಸ್ಟರ್ ವಿಜೇತ್, ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಡಿಸೋಜ, ಪಾಲನ ಮಂಡಳಿಯ ಕಾರ್ಯದರ್ಶಿ ಲೀಡಿಯ ಲೋಬೊ, ಸರ್ವ ಅಯೋಗದ ಸಂಯೋಜಕ ಲಿಸ್ಟನ್ ಡಿಸೋಜ ಭಾಗವಹಿಸಿದ್ದರು.
ಸಂಸ್ಥೆಯಲ್ಲಿ 30 ವರ್ಷಕ್ಕಿಂತ ಅಧಿಕ ಕಾಲ ಕರ್ತವ್ಯ ನಿರ್ವಹಿಸಿದ ಮಾರ್ಸೆಲ್ ಡಿಸೋಜ ಹಾಗು ದಾನಿ ಸಂತೋಷ್ ಸೀಕ್ವೇರಾ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ವಿಪಿ ಘಟಕದ ಅಧ್ಯಕ್ಷ ಎಡ್ವಿನ್ ಪಿಂಟೊ ಸ್ವಾಗತಿಸಿದರು. ಕೋಶಾಧಿಕಾರಿ ಲೊರೆನ್ಸ್ ಡಿಸೋಜ ವಂದಿಸಿದರು. ಗ್ಲೇವಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.





