ಹಾಸನ ಜಿಲ್ಲೆಯ ವ್ಯಕ್ತಿ ಮಂಗಳೂರಿನಲ್ಲಿ ನಾಪತ್ತೆ

ಮಂಗಳೂರು, ಸೆ.29: ಹಾಸನ ಜಿಲ್ಲೆಯ ಅರಸೀಕೆರೆ ಎಂಬಲ್ಲಿನ ವಡೇರಹಳ್ಳಿ ಮೂಲದ ನಗರದ ಎಕ್ಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದೇವರಾಜು ವಿ.ಇ. (48) ಎಂಬವರು ನಾಪತ್ತೆಯಾಗಿದ್ದಾರೆ.
ಸೆ.25ರಂದು ಸಂಜೆಯ ಬಳಿಕ ಕಾಣೆಯಾಗಿದ್ದಾರೆ. ಸುಮಾರು 5.5 ಅಡಿ ಎತ್ತರದ, ಬಿಳಿ ಮೈಬಣ್ಣದ, ಸಾಧಾರಣ ಶರೀರದ, ದುಂಡು ಮುಖದ ದೇವರಾಜು ಕಾಣೆಯಾದಾಗ ಕೆಂಪು ಮತ್ತು ಕಂದು ಬಣ್ಣದ ಟಿ-ಶರ್ಟ್, ಆಕಾಶ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





