ಕೆನರಾ ವಾಣಿಜ್ಯ, ಕೈಗಾರಿಕಾ ಸಂಸ್ಥೆಯ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಸೆ.29: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಎಲ್ಲಾ ಸದಸ್ಯರ 85ನೇ ವಾರ್ಷಿಕ ಮಹಾ ಸಭೆಯು ಸಂಸ್ಥೆಯ ನೋಂದಾಯಿತ ಕಚೇರಿಯಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ 2025-26ನೇ ಸಾಲಿಗೆ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಂಸ್ಥೆಯ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ವಿವರ ಇಂತಿವೆ
ಅಧ್ಯಕ್ಷರಾಗಿ ಉದ್ಯಮಿ ಪಿ. ಬಿ. ಅಹ್ಮದ್ ಮುದಸ್ಸರ್ ಆಯ್ಕೆಯಾದರು.
ಇತರ ಪದಾಧಿಕಾರಿಗಳ ವಿವರ ಇಂತಿವೆ.
ದಿವಾಕರ್ ಪೈ ಕೊಚ್ಚಿಕರ್(ಉಪಾಧ್ಯಕ್ಷರು) , ಸಿಎ ಅಬ್ದುರ್ ರೆಹಮಾನ್ ಮುಸ್ಬಾ(ಗೌರವ ಖಜಾಂಚಿ), ಅಶ್ವಿನ್ ಪೈ ಮರೂರ್ ಮತ್ತು ಜೀತನ್ ಅಲೆನ್ ಸಿಕ್ವೇರಾ(ಗೌರವ ಕಾರ್ಯದರ್ಶಿಗಳು)
ಆದಿತ್ಯ ಪದ್ಮನಾಭ ಪೈ, ಎಂ. ಆತ್ಮಿಕಾ ಅಮೀನ್, ಅಮಿತ್ ರಾಮಚಂದ್ರ ಆಚಾರ್ಯ, ನಿಸ್ಸಾರ್ ಫಕೀರ್ ಮುಹಮ್ಮದ್, ಬಿ.ಎ. ನಝೀರ್, ವಿನ್ಸೆಂಟ್ ಕುಟಿನ್ಹಾ, ಆಶಿತ್ ಬಿ. ಹೆಗ್ಡೆ, ಸಿಎ ನಂದಗೋಪಾಲ್ ಶೆಣೈ, ಸುಜೀರ್ ಪ್ರಸಾದ್ ನಾಯಕ್, ಅಜಯ್ ಪ್ರಭು ಕಾರ್ಕಳ, ನಿಟ್ಟೆ ದಶರಥ ಶೆಟ್ಟಿ( ನಿರ್ದೇಶಕರು).
*ಸುಸ್ಥಿರ ಅಭಿವೃದ್ಧಿ ಪ್ರಥಮ ಆದ್ಯತೆಯಾಗಲಿ: ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ. ಬಿ.ಅಹ್ಮದ್ ಮುದಸ್ಸರ್ ಅವರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸಮಾನ ಮನಸ್ಕ ಸಂಸ್ಥೆಗಳು ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಘಟಕಗಳೊಂದಿಗೆ ಸಕ್ರಿಯವಾಗಿ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಐಟಿ, ಪ್ರವಾಸೋದ್ಯಮ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಗರವು ಬೆಳವಣಿಗೆಯ ಹಾದಿಯಲ್ಲಿದ್ದು, ಸುಸ್ಥಿರ ಅಭಿವೃದ್ಧಿ ಪ್ರಥಮ ಆದ್ಯತೆಯಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.







