ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ವೆಸ್ಟ್ ಜಿಲ್ಲೆ ಸಮಿತಿಯಿಂದ 'ಲೀಡ್ ಕ್ರಾಫ್ಟ್' ಕಾರ್ಯಕರ್ತರ ಸಮಾವೇಶ

ಬಿ.ಸಿ.ರೋಡ್: ಭಕ್ತಿ ಮತ್ತು ನಿಷ್ಠೆ ಪ್ರತಿಯೊರ್ವ ಸುನ್ನೀ ಕಾರ್ಯಕರ್ತನ ಮುಖಚರ್ಯೆಯಾಗಿದ್ದು ಅವುಗಳಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಕೇರಳ ಮುಸ್ಲಿಮ್ ಜಮಾಅತ್ ನಾಯಕ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಕಾರ್ಯಕರ್ತರಿಗೆ ಉಪದೇಶ ನೀಡಿದರು.
ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ವೆಸ್ಟ್ ಜಿಲ್ಲೆಯ ವತಿಯಿಂದ ಪಾಣೆಮಂಗಳೂರಿನ ಸಾಗರ್ ಹಾಲ್ ನಲ್ಲಿ ಆಯೋಜಿಸಿದ್ದ 'ಲೀಡ್ ಕ್ರಾಫ್ಟ್' ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದರ ದುಆ ಆಶೀರ್ವಚನದೊಂದಿಗೆ ಆರಂಭವಾದ ಸಮಾವೇಶವನ್ನು ಕರ್ನಾಟಕ ಮುಸ್ಲಿಮ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂ ಸುಫಿಯಾನ್ ಮದನಿ ಉದ್ಘಾಟಿಸಿದರು. ಎಸ್.ಪಿ. ಹಂಝ ಸಖಾಫಿ, ಜಿ.ಎಂ.ಎಂ.ಸಖಾಫಿ, ಮಲ್ಜಹ್ ತಂಙಳ್ ಮತ್ತಿತರರು ಮಾತನಾಡಿದರು.
ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಅಬ್ದುರ್ರಝಾಕ್ ಮದನಿ ಅಕ್ಕರಂಗಡಿ, ಕರ್ನಾಟಕ ಮುಸ್ಲಿಮ್ ಜಮಾಅತ್ ಕಾರ್ಯದರ್ಶಿ ಹಮೀದ್ ಬಜ್ಪೆ, ಸಾದಿಕ್ ಮಾಸ್ಟರ್, ಬಶೀರ್ ಹಾಜಿ ಕುಂಬ್ರ, ದ.ಕ. ಈಸ್ಟ್ ಜಿಲ್ಲಾ ಕಾರ್ಯದರ್ಶಿ ಯೂಸುಫ್ ಸಯೀದ್, ಮಜೂರ್ ಸಅದಿ, ಸಾದಿಕ್ ಮಾಸ್ಟರ್, ಎಸ್.ಎಂ.ಎ. ನಾಯಕ ಹಮೀದ್ ಹಾಜಿ, ಕಾಸಿಂ ಹಾಜಿ ಪುತ್ತೂರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ 'ವಿಶ್ವಾಸಪೂರ್ವಂ' ಕನ್ನಡ ಆವೃತ್ತಿ 'ಪ್ರೀತಿಯಿಂದ' ಪುಸ್ತಕದ ಮುಖಪುಟ ಬಿಡುಗಡೆಗೊಳಿಸಲಾಯಿತು. ಪುಸ್ತಕದ ಪ್ರೀ ಪಬ್ಲಿಕೇಶನ್ ಬುಕ್ಕಿಂಗ್ ಕೂಡ ಇದೇ ಸಂದರ್ಭದಲ್ಲಿ ಆರಂಭಿಸಲಾಯಿತು.
ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಹನೀಫ್ ಹಾಜಿ ಬಜ್ಪೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರ.ಕಾರ್ಯದರ್ಶಿ ಖತರ್ ರಹೀಮ್ ಸಅದಿ ಸ್ವಾಗತಿಸಿದರು.







