ಮಂಗಳೂರು ವಿವಿ ವಾಣಿಜ್ಯ ವಿಭಾಗದಲ್ಲಿ ವಿಶೇಷ ಉಪನ್ಯಾಸ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಬದುಕು ಮತ್ತು ಆರ್ಥಿಕ ನಿರ್ವಹಣೆ ಕಲೆಯ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರಾಧ್ಯಾಪಕ ಹಾಗೂ ಆರ್ಥಿಕ ತಜ್ಞರಾದ ಡಾ.ಕೆ.ಯು. ಮಾದ ಮಾತನಾಡಿ, ಸಮಯದ ಪರಿಣಾಮಕಾರಿಯಾದ ಬಳಕೆಯು ಭವಿಷ್ಯತ್ತಿಗೆ ಹೂಡಿಕೆಯಾಗಿದೆ. ಇದರಿಂದ ಬದುಕನ್ನು ನಾವು ಯೋಜಿತವಾಗಿ ನಿರ್ವಹಿಸಲು ಸಹಕಾರಿ ಎಂದರು.
ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವುದರಿಂದ ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ಶೈಕ್ಷಣಿಕ ಬೆಳವಣಿಗೆಯೊಂದಿಗೆ ವ್ಯಕ್ತಿಯ ಮೌಲ್ಯವು ಹೆಚ್ಚುತ್ತದೆ. ಹಣಕಾಸನ್ನು ಶಿಸ್ತುಬದ್ಧವಾಗಿ ಉಪಯೋಗಿಸುವುದನ್ನು ನಾವೆಲ್ಲರೂ ಪಾಲಿಸಬೇಕು. ಇದರಿಂದ ಆರ್ಥಿಕ ನಿರ್ವಹಣೆಯ ಮಹತ್ವ ಹೆಚ್ಚುತ್ತದೆ ಎಂದು ಅಭಿಪ್ರಾಯಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಈಶ್ವರ ಪಿ. ಮತ್ತು ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವಾಜೀದಾ ಬಾನು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸಿ. ಲಹರಿ ಮತ್ತು ವೈಶಾಲಿ ಕೆ. ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿನಿ ಅಫ್ನಾ ವಂದಿಸಿದರು.





