ದನದ ಮಾಂಸ ಮಾರಾಟ ಆರೋಪ: ನಾಲ್ಕು ಮಂದಿ ಸೆರೆ

ಮಂಗಳೂರು, ಅ.4: ಉಳಾಯಿಬೆಟ್ಟು ಎಂಬಲ್ಲಿನ ಮನೆಯೊಂದರ ಬಳಿ ಶೆಡ್ ನಿರ್ಮಿಸಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಉಳಾಯಿಬೆಟ್ಟು ಬೋರುಗುಡ್ಡೆ ಹೌಸ್ ನಿವಾಸಿಗಳಾದ ಸಿದ್ದೀಕ್ (45), ಶರೀಫ್ (43), ಉಳಾಯಿಬೆಟ್ಟು ಸಂಕಮಾರ್ ನಿವಾಸಿಗಳಾದ ಇಸಾಕ್ (53), ಜಲಾಲುದ್ದೀನ್ (26) ಎಂಬವರನ್ನು ಪೊಲೀಸರು ಬಂಧಿಸಿ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Next Story





