ಶಾರದೋತ್ಸವ ಮೆರವಣಿಗೆಯಲ್ಲಿ ಗೊಂದಲ: ಸೂಕ್ತ ನಡೆಸಲು ಕಮಿಷನರ್ ಗೆ ಸ್ಪೀಕರ್ ಯುಟಿ ಖಾದರ್ ಸೂಚನೆ

ಉಳ್ಳಾಲ: ಧಾರ್ಮಿಕತೆಯ ಆಚರಣೆಯ ಜೊತೆಯಲ್ಲಿ ಉಳ್ಳಾಲದ ಸೌಹಾರ್ದತೆಯ ಸಂಕೇತವಾಗಿರುವ ಶಾರದೋತ್ಸವ ಮೆರವಣಿಗೆ ವೇಳೆ ನಡೆದ ಘಟನೆಯು ಅತ್ಯಂತ ವಿಷಾದನೀಯ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದ್ದಾರೆ.
ಗೊಂದಲ ಉಂಟಾಗಲು ಕೆಲವು ಪೊಲೀಸರು ಕಾರಣ ಎಂದು ಸಾರ್ವಜನಿಕರಲ್ಲಿ ಅಭಿಪ್ರಾಯವಿದೆ. ಇದರ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಯಾರಾದರೂ ಇದ್ದಲ್ಲಿ ಕ್ರಮ ಕೈಗೊಂಡು, ಘಟನೆಯಲ್ಲಿ ಅಮಾಯಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Next Story





