ಮೈಸೂರು ದಸರಾ: ದ.ಕ. ಜಿಲ್ಲೆಗೆ ದ್ವಿತೀಯ ಪ್ರಶಸ್ತಿ

ಮಂಗಳೂರು, ಅ.5: ಮೈಸೂರು ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ದಕ್ಷಿಣ ಕನ್ನಡ ಟ್ಯಾಬ್ಲೋ ಪ್ರದರ್ಶನಕ್ಕೆ ದ್ವಿತೀಯ ಪ್ರಶಸ್ತಿ ಬಂದಿದೆ.
ಅ. 2ರಂದು ನಡೆದ ದಸರಾ ಮೆರವಣಿಗೆಯಲ್ಲಿ ದ.ಕ. ಜಿಲ್ಲೆಯ ಕಲೆ ಸಂಸ್ಕೃತಿ, ಸಾಂಪ್ರದಾಯಿಕ ಕ್ರೀಡೆಯನ್ನು ಪ್ರತಿಬಿಂಬಿಸುವ ಟ್ಯಾಬ್ಲೋ ಪ್ರದರ್ಶನ ಮಾಡಲಾಗಿತ್ತು. ಯಕ್ಷಗಾನ, ಕಂಬಳ, ಹುಲಿವೇಷ ಮತ್ತಿತರ ಸಾಂಪ್ರದಾ ಯಿಕ ಮತ್ತು ಜಾನಪದ ಕ್ರೀಡೆಗಳ ವಿಷಯಗಳನ್ನು ಈ ಟ್ಯಾಬ್ಲೋದಲ್ಲಿ ಅಳವಡಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿರವರ ಮಾರ್ಗದರ್ಶನದಲ್ಲಿ ಟ್ಯಾಬ್ಲೋ ನಿರ್ಮಿಸಲಾಗಿತ್ತು. ನೋಡಲ್ ಅಧಿಕಾರಿಯಾಗಿ ಗ್ರಾಮೀಣ ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಹೆಗಡೆ ಕಾರ್ಯ ನಿರ್ವಹಿಸಿದ್ದರು.
Next Story





