ಮೇಲ್ತೆನೆಯ ಮೆಹಂದಿ-ಆಶುಕವನ ಸ್ಪರ್ಧೆಯ ಫಲಿತಾಂಶ ಪ್ರಕಟ

ದೇರಳಕಟ್ಟೆ, ಅ.5: ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದಮಾರೊ ಕೂಟ) ದೇರಳಕಟ್ಟೆ ಇದರ ದಶಮಾನೋತ್ಸವ ಪ್ರಯುಕ್ತ ಏರ್ಪಡಿಸಲಾದ ಮೆಹಂದಿ ಮತ್ತು ಆಶುಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿವೆ.
ಮೆಹಂದಿ ಸ್ಪರ್ಧೆಯಲ್ಲಿ ಫಾತಿಮಾ ಫಝೀನಾ ಕುಂಪಲ (ಪ್ರಥಮ), ಸಾನಿಯಾ ಅಡ್ಕರೆಪಡ್ಪು (ದ್ವಿತೀಯ), ಫಾತಿಮಾ ಸನಾ ಕಿನ್ಯ (ತೃತೀಯ) ಬಹುಮಾನ ಗಳಿಸಿದ್ದಾರೆ. ತೀರ್ಪುಗಾರರಾಗಿ ಫಾಯಿಝಾ ಬಿ.ಸಿ.ರೋಡ್ ಮತ್ತು ತೌಫಿಯಾ ಬಿ.ಸಿ.ರೋಡ್ ಸಹಕರಿಸಿದ್ದರು.
ಆಶುಕವನ ಸ್ಪರ್ಧೆಯಲ್ಲಿ ಅಸ್ಮತ್ ವಗ್ಗ (ಪ್ರಥಮ), ಫರ್ಹಾನಾ ಉಳ್ಳಾಲ (ದ್ವಿತೀಯ), ಅಹ್ಮದ್ ಬಶೀರ್ ಮುಡಿಪು (ತೃತೀಯ) ಬಹುಮಾನ ಗಳಿಸಿದ್ದಾರೆ. ತೀರ್ಪುಗಾರರಾಗಿ ಅಶೀರುದ್ದೀನ್ ಸಾರ್ತಬೈಲ್, ಅಬೂಬಕರ್ ಎಚ್.ಕಲ್., ರಿಯಾಝ್ ಮಂಗಳೂರ ಸಹಕರಿಸಿದ್ದರು ಎಂದು ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





