ಯೂತ್ ಪೋರಂಗೆ ಪದಾಧಿಕಾರಿಗಳ ಆಯ್ಕೆ

ತೊಕ್ಕೊಟ್ಟು: ಯೂತ್ ಪೋರಂ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಮೌಶೀರ್ ಅಹ್ಮದ್ ಸಾಮಣಿಗೆ ಉಪಸ್ಥಿತಿಯಲ್ಲಿ 2025-26ನೇ ಸಾಲಿನ ನೂತನ ಸದಸ್ಯತ್ವ ಅಭಿಯಾನ ಹಾಗೂ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ನಡೆಯಿತು.
ಅಧ್ಯಕ್ಷರಾಗಿ ಆರ್.ಕೆ. ರಿಯಾಝ್, ಉಪಾಧ್ಯಕ್ಷರಾಗಿ ನಝೀರ್ ಬಾರ್ಲಿ ಮತ್ತು ರಾಝಿಕ್ ಅತೂರ್, ಪ್ರಧಾನ ಕಾರ್ಯದರ್ಶಿಯಾಗಿ ರಾಝಿಕ್ ಕೊಣಾಜೆ, ಜೊತೆ ಕಾರ್ಯದರ್ಶಿಯಾಗಿ ಶಮೀರ್ ಕೆ.ಸಿ. ರೋಡ್, ಹಮಿದ್ ಉಳ್ಳಾಲ್, ಕೋಶಾಧಿಕಾರಿಯಾಗಿ ಇರ್ಶಾದ್ ಸೋಲಾರ್ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಜಾಲತಾಣಕ್ಕೆ ಸೋಶಿಯಲ್ ಫಾರೂಕ್ ಹಾಗೂ ಗೌರವ ಸಲಹೆಗಾರರಾಗಿ ಲತೀಫ್ ಮತ್ತು ಸಲೀಂ ಬೋಳಾರ್ ಮತ್ತು ಕಾರ್ಯಕಾರಿ ಸಮಿತಿಗೆ 21 ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





