ಸಿಐಟಿಯು ದ.ಕ. ಜಿಲ್ಲಾ ನೂತನ ಅಧ್ಯಕ್ಷರಾಗಿ ಬಿ.ಎಂ. ಭಟ್ ಆಯ್ಕೆ

ಬಿ.ಎಂ. ಭಟ್
ಮಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಎಂ. ಭಟ್ ಆಯ್ಕೆಯಾಗಿದ್ದಾರೆ.
ನಗರದ ಬೋಳಾರದಲ್ಲಿ ಇತ್ತೀಚೆಗೆ ನಡೆದ 18ನೇ ದ.ಕ.ಜಿಲ್ಲಾ ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಈ ಆಯ್ಕೆ ನಡೆಯಿತು. ದ.ಕ.ಜಿಲ್ಲೆಯ ಕಾರ್ಮಿಕ ವರ್ಗಕ್ಕೆ ಆಗುತ್ತಿರುವ ಹಲವು ಅಂಶಗಳ ಬಗ್ಗೆ ನಿರ್ಣಯ ಗಳನ್ನು ಕೈಗೊಂಡ ಸಮ್ಮೇಳನವು ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟಗಳನ್ನು ರೂಪಿಸಲು ತೀರ್ಮಾನ ಕೈಗೊಂಡಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಬಜಾಲ್, ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರು, ಉಪಾಧ್ಯಕ್ಷರಾಗಿ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟು, ವಸಂತ ಆಚಾರಿ, ಪದ್ಮಾವತಿ ಶೆಟ್ಟಿ, ರಮಣಿ ಮೂಡುಬಿದಿರೆ, ಯಾದವ ಶೆಟ್ಟಿ, ಸುಂದರ ಕುಂಪಲ, ನೋಣಯ್ಯ ಗೌಡ, ಕಾರ್ಯದರ್ಶಿಗಳಾಗಿ ರಾಧಾ ಮೂಡುಬಿದಿರೆ, ರವಿಚಂದ್ರ ಕೊಂಚಾಡಿ, ಗಿರಿಜಾ ಮೂಡುಬಿದಿರೆ, ಬಿ.ಕೆ. ಇಮ್ತಿಯಾಝ್, ವಸಂತಿ ಕುಪ್ಪೆಪದವು, ಲೋಕಾಕ್ಷಿ ಬಂಟ್ವಾಳ, ಈಶ್ಬರಿ ಬೆಳ್ತಂಗಡಿ, ರೋಹಿದಾಸ್ ಭಟ್ನಗರ, ಭವ್ಯಾ ಮುಚ್ಚೂರು ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿವಿಧ ಯೂನಿಯನ್, ಸಂಘಟನೆಗಳ 35 ಮಂದಿಯನ್ನು ಆರಿಸಲಾಯಿತು.





