ನೀವಿಯಸ್ ಮಂಗಳೂರು ಮ್ಯಾರಥಾನ್: ಟಿ-ಶರ್ಟ್, ಪದಕ ಅನಾವರಣ

ಮಂಗಳೂರು, ಅ.7: ಮಂಗಳಾ ಕ್ರೀಡಾಂಗಣದಲ್ಲಿ ನವೆಂಬರ್ 9 ರಂದು ನಡೆಯಲಿರುವ ನೀವಿಯಸ್ ಮಂಗಳೂರು ಮ್ಯಾರಥಾನ್ 2025 ರ ಭಾಗವಹಿಸುವವರ ಟಿ-ಶರ್ಟ್ ಮತ್ತು ಫಿನಿಶರ್ ಪದಕವನ್ನು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್ ಮಂಗಳವಾರ ಅನಾವರಣಗೊಳಿಸಿದರು.
ನೀವಿಯಸ್ ಮಂಗಳೂರು ಮ್ಯಾರಥಾನ್‌ನ ರೇಸ್ ಡೈರೆಕ್ಟರ್ ಮೆಹ್ವಿಶ್ ಹುಸೈನ್ ಮಾಗಿತಿ ನೀಡಿ ‘ರೇಸ್‌ನಲ್ಲಿ ಭಾರತದ ವಿವಿಧ ರಾಜ್ಯಗಳಿಂದ 6,000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವುದನ್ನು ನಿರೀಕ್ಷಿಸಲಾಗಿಸಲಾಗಿದೆ 42.2 ಕಿಮೀ ಪೂರ್ಣ ಮ್ಯಾರಥಾನ್‌ನಿಂದ 2 ಕಿಮೀ ‘ಗಮ್ಮತ್ ಓಟ’ದವರೆಗೆ ವಿವಿಧ ರೇಸ್ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ಅಧ್ಯಕ್ಷ ಜೋಯಲ್ ರೆಬೆಲ್ಲೊ, ಎಂಆರ್‌ಸಿ ಕಾರ್ಯದರ್ಶಿ ರಿತು ಬರಿವಾಲ್, ಮತ್ತಿತರರು ಉಪಸ್ಥಿತರಿದ್ದರು.
Next Story





