ಎನ್‌ಐಟಿಕೆ: ತುರ್ತು ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಅಣುಕು ಪ್ರದರ್ಶನ

ಸುರತ್ಕಲ್: ವಿಮಾನಯಾನ ಸಂಸ್ಥೆಗಳಿಗೆ ಪಟ್ರೋಲಿಯಂ ಸಾಗಾಟ ಮಾಡುವ ಶೆಲ್ ಎಂಆರ್ಪಿಎಲ್ ಕುತ್ತೆತ್ತೂರು ಸಂಸ್ಥೆಯ ವತಿಯಿಂದ ಇಂಧನ ಸಾಗಾಟದ ಸಂದರ್ಭ ನಡೆಯಬಹುದಾದ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಬುಧವಾರ ಅಣುಕು ಪ್ರದರ್ಶನ ನಡೆಯಿತು.
ಈ ವೇಳೆ ಟ್ರೋಲಿಯಂ ಉತ್ಪನ್ನಗಳು ಸಾಗಾಟ ಮಾಡುತ್ತಿದ್ದ ವೇಳೆ ತಾಂತ್ರಿಕ ದೋಷಗಳು ಕಂಡುಬಂದಾಗ ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಇಂಧನವನ್ನು ಸ್ಥಳಾಂತರಿಸುವ ಮತ್ತು ಅಪಘಾತ ನಡೆದ ಸಮಯಗಳಲ್ಲಿ ಕೈಗೊಳಬೇಕಾದ ಕ್ರಮಗಳು, ಈ ವೇಳೆ ಅಸ್ವಸ್ಥರಾಗಿರುವ ಚಾಲಕರು ನಿರ್ವಾಹಕರ ರಕ್ಷಣೆ ಮಾಡುವ ಕುರಿತು ಅಣುಕು ಪ್ರದರ್ಶನದಲ್ಲಿ ಮಾಹಿತಿ ನೀಡಲಾಯಿತು.
ಈ ಸಂದರ್ಭ ಶೆಲ್ ಮ್ಯಾನೇಜರ್ ಶ್ರೀನಿವಾಸ ಕುಳಾಯಿ, ಶಿವ ಕೋಟೇಶ್ವರ, ಜೋಸೆಫ್ ಪಿರೇರಾ, ಅರುಣ್ ರಾಜ್, ಟ್ರಾನ್ಸ್ ಪೋಟರ್ ಗಳಾದ ರಾಜೇಶ್ ಕೊಟ್ಟಾರಿ, ಭಕ್ತೇಶ್, ಕುಮಾರಣ್, ಮುರಳಿ, ಬಾಲಚಂದ್ರ, ರವೀಂದ್ರ ಹಾಗೂ ಸುರತ್ಕಲ್ ಪೊಲೀಸರು, ಎಂಆರ್ಪಿಎಲ್ ಅಗ್ನಿ ಶಾಮಕ ದಳ ಮೊದಲಾದವರು ಇದ್ದರು.





