"ವಿನ್ಯಾಸದಲ್ಲಿ ಸಂಶೋಧನೆ ಮತ್ತು ಯೋಜನಾಧರಿತ ಕಲಿಕೆ" ವಿಷಯದ ಕುರಿತು ತರಬೇತಿ ಕಾರ್ಯಾಗಾರ

ಮೂಡುಬಿದಿರೆ: ವಿಶ್ವೇಶ್ವರಯ್ಯ ವಿವಿ ಬೆಳಗಾವಿ ಮತ್ತು ಯೇನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ "ವಿನ್ಯಾಸದಲ್ಲಿ ಸಂಶೋಧನೆ ಮತ್ತು ಯೋಜನಾಧರಿತ ಕಲಿಕೆ" ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವು ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಬೆಳಗಾವಿ ವಿವಿಯ ಮಂಗಳೂರು ವಿಸ್ತರಣಾ ಕೇಂದ್ರದ ವಿಶೇಷ ಅಧಿಕಾರಿ ಡಾ. ದಾಮೋದರ ನರಲ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಿಕ್ಷಣ ವ್ಯವಸ್ಥೆ ಹಾಗೂ ಔದ್ಯೋಗಿಕ ಕ್ಷೇತ್ರಗಳ ಕೊಂಡಿಯಾಗಿ ಕಾರ್ಯಾಗಾರಗಳು ಕೆಲಸ ಮಾಡುತ್ತವೆ. ಇದರಿಂದ ಹೊಸ ಚಿಂತನೆಗಳು ಮತ್ತು ಪ್ರಬುದ್ಧ ಯೋಜನೆಗಳು ಹುಟ್ಟಿಕೊಂಡು ಸಂಶೋಧನೆಗಳಿಗೆ ನಾಂದಿ ಹಾಡುತ್ತವೆ ಎಂದರು.
ಪ್ರಾಂಶುಪಾಲ ಡಾ. ಅಬ್ದುಲ್ ಕರೀಂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಿರ್ವಹಣಾ ಮುಖ್ಯಸ್ಥ ಸುಮೇಶ್ ಮಠದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಉಪ ಪ್ರಾಂಶುಪಾಲ ಡಾ. ಪ್ರಭಾಕರ ಬಿ ಕೆ., ಕ್ಯಾಂಪಸ್ ಆಡಳಿತಾಧಿಕಾರಿ ಮುಹಮ್ಮದ್ ಬಿ. ಶಾಹಿದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಡಾ. ಸಂತೋಷ ಆಚಾರ್ಯ ಸ್ವಾಗತಿಸಿದರು. ಸೌಂದಯ೯ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಾಗಾರದಲ್ಲಿ ಮಂಗಳೂರು ವಲಯದ ವಿವಿಧ ತಾಂತ್ರಿಕ ಕಾಲೇಜಿನ 120 ಪ್ರಾಧ್ಯಾಪಕರು ಭಾಗವಯಿಸಿದ್ದರು.







