ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪಟ್ಟಣ ಪಂಚಾಯತ್‌ಗೆ ಮುತ್ತಿಗೆ

ಬಜ್ಪೆ: ಜಲಸಿರಿ ಯೋಜನೆಯಡಿ ಪೈಪ್ ಅಳವಡಿಸುವ ನೆಪವೊಡ್ಡಿ ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲೆಂದರಲ್ಲಿ ಕಾಂಕ್ರಿಟ್ ರಸ್ತೆಗಳನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ಗೆ ನಾಗರೀಕರು ಬುಧವಾರ ಮುತ್ತಿಗೆ ಹಾಕಿದರು.
ನಾಗರೀಕರ ಬೇಡಿಕೆಗಳನ್ನು ಆಲಿಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಾಂತಲಾ ಅವರು ಜಲಸಿರಿ ಯೋಜನೆಯ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಕೂಡಲೇ ಅಲ್ಲಲ್ಲಿ ಅಗೆದ ಹೊಂಡಗಳನ್ನು ಮುಚ್ಚಬೇಕು. ರಾಶಿ ಬಿದ್ದಿರುವ ಮಣ್ಣನ್ನು ತೆರವು ಮಾಡಿ ಸಮತಟ್ಟಯ ಮಾಡಬೇಕು. ಒಡೆದು ಹಾಕಲಾಗಿರುವ ಕಾಂಕ್ರಿಟ್ ರಸ್ತೆಗಳಿಗೆ ಪುನಃ ಕಾಂಕ್ರಿಟ್ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾಲಮಿತಿಯಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರರು ಕ್ರಮ ವಹಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಜ್ಪೆ ನಾಗರೀಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ ಎಚ್ಚರಿಕೆ ನೀಡಿದರು.
ಈ ಸಂದರ್ಭ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಕಾನೂನು ಸಲಹೆಗಾರರಾದ ಮಾದವ ಅಮೀನ್, ಗೌರವ ಅಧ್ಯಕ್ಷರಾದ ಮುಹಮ್ಮದ್ ಮೋನಾಕ, ಉಪಾದ್ಯಕ್ಷರಾದ ಇಂಜಿನಿಯರ್ ಇಸ್ಮಾಯಿಲ್, ಥೋಮಸ್, ಕಾರ್ಯ ದರ್ಶಿಗಳಾದ ನಿಸಾರ್ ಕರಾವಳಿ ಮತ್ತು ಆಯಿಷಾ, ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರಾದ ವಸಂತ, ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ ಮತ್ತು ಹಸೈನಾರ್, ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಮಾಲತಿ, ದಲಿತ ಸಂಘದ ಮುಖಂಡರಾದ ಶಾಂತ, ಕೊರಗ ಸಮುದಾಯದ ಮುಖಂಡರಾದ ಕಿರಣ್, ನಾಗರೀಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ರಿಯಾಜ್ ಪೊರ್ಕೋಡಿ, ಹಮೀದ್ ಜರಿ, ಬಿ.ಎಚ್.ಖಾದರ್ ಜರಿ, ಅನ್ವರ್ ರಝಾಕ್ ಬಜ್ಪೆ , ಹಮೀದ್ ಕೂಲ್ ಪಾಯಿಂಟ್, ಇರ್ಷಾದ್, ಸಲಾಂ ಹಾಗೂ ಸ್ಥಳೀಯ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.







