ವಿದ್ಯಾರ್ಥಿ ನಾಪತ್ತೆ

ಮಂಗಳೂರು, ಅ.8: ಮೂಲತ: ಗದಗ ಜಿಲ್ಲೆಯವನಾಗಿದ್ದು ನಗರದ ಸುಭಾಷ್ ನಗರದಲ್ಲಿ ವಾಸವಿದ್ದ ಪಿಯುಸಿ ವಿದ್ಯಾರ್ಥಿ ಸಮರ್ಥ್ ಅರುಣ್ ಗುಜಮಾಗಡಿ ನಾಪತ್ತೆಯಾಗಿದ್ದಾನೆ.
ನಗರದ ಬಾವುಟಗುಡ್ಡೆಯ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಯಾಗಿದ್ದ ಸಮರ್ಥ್ ಅ.4ರಂದು ಬೆಳಗ್ಗೆ ಕಾಲೇಜಿಗೆ ಹೋಗಿ ಕಾಲೇಜು ಮುಗಿಸಿ ಮನೆಗೆ ಬಂದು ಮ್ಯಾರಥಾನ್‌ಗೆ ಹೋಗಲೆಂದು ಹೇಳಿ ತಾಯಿಯ ಬಳಿಯಿಂದ ಆಧಾರ್ ಕಾರ್ಡ್‌ನ್ನು ಕೇಳಿದ್ದ. ತಾಯಿ ಈ ಬಗ್ಗೆ ವಿಚಾರಿಸಿ, ಕೊಡುವು ದಿಲ್ಲ ಎಂದು ಹೇಳಿದಾಗ ಮನೆಯಿಂದ ಹೊರಟು ಹೋದವನು ವಾಪಸಾಗಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
Next Story





