ಕೇರಳದಿಂದ ಅಕ್ರಮ ಕಲ್ಲು ಸಾಗಾಟ ಆರೋಪ : ಇಬ್ಬರ ಬಂಧನ

ಉಳ್ಳಾಲ: ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಇನ್ಸ್ಪೆಕ್ಟರ್ ವಿರೂಪಾಕ್ಷ ನೇತೃತ್ವದ ಪೊಲೀಸರ ತಂಡ ಮೂರು ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಗುರುವಾರ ನಡೆದಿದೆ.
ಬಂಧಿತರನ್ನು ಲಾರಿ ಚಾಲಕ ಇಕ್ಬಾಲ್ ಮೋಂಟೆಪದವು ,ಮಾಲಕ ಶಫೀಕ್ ಎಂದು ಗುರುತಿಸಲಾಗಿದೆ.
ಪೊಲೀಸರು ಕೆಂಪು ಕಲ್ಲು ಸಾಗಾಟದ ಒಂದು ಲಾರಿಯನ್ನು ತಲಪಾಡಿ ಯಲ್ಲಿ ಎರಡು ಲಾರಿಗಳನ್ನು ತೌಡುಗೋಳಿ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ನಾಲ್ಕು ಮಂದಿ ಆರೋಪಿಗಳಿಗೆ ನೋಟೀಸ್ ನೀಡಿರುವ ಪೊಲೀಸರು ವರದಿ ಠಾಣೆಗೆ ವರದಿ ನೀಡಬೇಕು ಎಂದು ಕೋರಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





