ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಖಾಝಿ ಹೌಸಿಗೆ ಭೇಟಿ

ಮಂಗಳೂರು, ಅ.10: ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷ ಎಂ.ಎ. ಅಬ್ದುಲ್ ಗಫೂರ್ ಶುಕ್ರವಾರ ನಗರದ ಬಂದರ್‌ನ ಮಸ್ಜಿದ್ ಝೀನತ್ ಭಕ್ಷ್‌ನಲ್ಲಿರುವ ಖಾಝಿ ಹೌಸಿಗೆ ಭೇಟಿ ನೀಡಿ ದ.ಕ ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ಅವರ ಆಶೀರ್ವಾದ ಪಡೆದರು.
ಈ ಸಂದರ್ಭ ಗಫೂರ್ ಅವರನ್ನು ಖಾಝಿ ಶಾಲು ಹೊದಿಸಿ ಸನ್ಮಾನಿಸಿದರು. ಉಪಾಧ್ಯಕ್ಷ ಅಶ್ರಫ್ ಕೆ.ಇ., ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಸದಸ್ಯರಾದ ಐ. ಮೊಯಿದಿನಬ್ಬ ಹಾಜಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಜಸ್ಟಿಸ್ ಫಾರಂ ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.
Next Story





