ಕಟ್ಟತ್ತಿಲ ಮಖಾಂ ಉರೂಸ್ ಪ್ರಚಾರ ಸಭೆ

ಸಾಲೆತ್ತೂರು, ಅ.10: ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮತ್ತು ಕಟ್ಟತ್ತಿಲ ಮಸೀದಿ ಖತೀಬ್ ಮುಹಮ್ಮದ್ ಮದನಿ ನೇತೃತ್ವದಲ್ಲಿ 2026ರ ಎಪ್ರಿಲ್ 10ರಿಂದ 19ರ ತನಕ ನಡೆಯುವ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮಖಾಂ ಉರೂಸ್ ಕಾರ್ಯಕ್ರಮದ ಪ್ರಚಾರಕ್ಕೆ ಅಸ್ಸಯ್ಯಿದ್ ಆಟಕೋಯ ತಂಳ್ ಕುಂಬೋಳ್ ಮತ್ತು ಅಸ್ಸಯ್ಯಿದ್ ಶಿಹಾಬುದ್ದೀನ್ ತಂಳ್ ಮದಕ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಿದರು.
ಅತಿಥಿಗಳಾಗಿ ಉಡುಪಿ ಸಹಾಯಕ ಖಾಝಿ ಮೂಳೂರು ಅಬ್ದುರ‌್ರಹ್ಮಾನ್ ಮದನಿ, ಅಬೂಬಕ್ಕರ್ ಮದನಿ ಕಟ್ಟತ್ತಿಲ, ಸದರ್ ಮುಅಲ್ಲಿಂ ಹೈದರ್ ಅಶ್ರಫಿ, ಅಲಿ ಮದನಿ, ಉಮರ್ ಲತೀಫಿ ಭಾಗವಹಿಸಿದ್ದರು.
ಅಧ್ಯಕ್ಷ ಡಿ.ಎ.ಹಮೀದ್ ಹಾಜಿ, ಉಪಾಧ್ಯಕ್ಷರಾದ ಟಿಪ್‌ಟಾಪ್ ಅಬ್ದುಲ್ ಖಾದರ್, ಟೆಲಿಫೋನ್ ಖಾದರ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಕೋಶಾಧಿಕಾರಿ ಕಾಲಮಜಲು ಇಬ್ರಾಹಿಂ ಹಾಜಿ, ಕಾರ್ಯದರ್ಶಿಗಳಾದ ಎಂ.ಮುಹಮ್ಮದ್ ಹಾಜಿ ಮೆದು, ಇಕ್ಬಾಲ್ ಮದನಿ, ಅಬ್ದುಲ್ ಹಮೀದ್ ಕಾಲಮಜಲ್, ಮುಹಮ್ಮದ್ ಕುಂಞಿ ಪಾಲ್ತಾಜೆ, ಬಿ.ಎಸ್. ಸ್ವಾದಿಕ್, ಲೆಕ್ಕಪರಿಶೋದಕ ನೌಫಲ್ ಡಿ, ಉರೂಸ್ ಕಮಿಟಿಯ ಮಾಜಿ ಕಾರ್ಯದರ್ಶಿ ಸಿದ್ದೀಕ್ ಸ್ಟೋರ್ ಮತ್ತಿತರರು ಉಪಸ್ಥಿತರಿದ್ದರು.





