ಮಂಗಳೂರು: ಸಮಸ್ತ ಸೆಂಟಿನರಿ ಸಂಭ್ರಮ ಪ್ರಯುಕ್ತ ಜಿಲ್ಲಾ ಮುಅಲ್ಲಿಂ ಸಮ್ಮೇಳನ

ಮಂಗಳೂರು: ಸಮಸ್ತ ಸೆಂಟಿನರಿ ಅಂಗವಾಗಿ ನಡೆಯುವ ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ದ.ಕ. ಜಿಲ್ಲಾ ಈಸ್ಟ್, ವೆಸ್ಟ್, ಸೌತ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಮಂಗಳವಾರ ನಡೆಯಿತು.
ಎಸ್.ಜೆ.ಎಂ. ಕರ್ನಾಟಕ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸಭಾಧ್ಯಕ್ಷತೆ ವಹಿಸಿದ್ದರು. ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ತೆನ್ನಲ ಅಬೂ ಹನೀಫಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ಸೈಯದ್ ಅಲಿ ಬಾಫಖೀ ತಂಙಳ್ ದುಆಗೆ ನೇತೃತ್ವ ನೀಡಿದರು. ವಿ.ಪಿ.ಎಂ.ಫೈಝಿ ವಿಲ್ಯಾಪಳ್ಳಿ, ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಪ್ರೊಫೆಸರ್ ಎ.ಕೆ. ಅಬ್ದುಲ್ ಹಮೀದ್ ಸಾಹಿಬ್, ಸಿ.ಪಿ.ಸೈದಲವಿ ಮಾಸ್ಟರ್ ಚೆಂಙ್ಙರ, ಉಮರ್ ಮದನಿ ಪಾಲಕ್ಕಾಡ್, ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷ ಕೊಡುಂಗಾಯಿ ಅಬ್ದುಲ್ ಹಮೀದ್ ಹಾಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಸ್ತ ಉಪಾಧ್ಯಕ್ಷ ಹಾಗೂ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ ಅಸ್ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ ಉಡುಪಿ, ಚಿಕ್ಕಮಗಳೂರು ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ , ಜಿ.ಎಂ.ಅಬೂಬಕರ್ ಸುನ್ನೀ ಫೈಝಿ ಪೆರುವಾಯಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮೊಗ್ರಾಲ್ ಅವರನ್ನು ಸ್ಮರಣಿಕೆ ಹಾಗೂ ನಗದು ನೀಡಿ ಗೌರವಿಸಲಾಯಿತು.
ಸುನ್ನೀ ಮದ್ರಸ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಮದ್ರಸ ಅಧ್ಯಾಪಕರನ್ನು ಮತ್ತು ಎಸ್.ಜೆ.ಎಂ.ಸಂಘಟನೆಗಾಗಿ ನಿಸ್ವಾರ್ಥ ಸೇವೆಗೈದ ಕೆಲವು ನಾಯಕರನ್ನು 'ಮುಅಲ್ಲಿಂ ಅವಾರ್ಡ್' ನೀಡಿ ಗೌರವಿಸಲಾಯಿತು.
ಸಮಸ್ತದ ಆದರ್ಶ ಎಂಬ ವಿಷಯದಲ್ಲಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಅಧ್ಯಾಪನ ಸೇವೆಯಾಗಿದೆ ಎಂಬ ವಿಷಯದಲ್ಲಿ ಕುಂಞಿಕುಳಂ ಸುಲೈಮಾನ್ ಸಖಾಫಿ, ಸಮಸ್ತ ತಂದ ವಿದ್ಯಾಭ್ಯಾಸ ಕ್ರಾಂತಿ ಎಂಬ ವಿಷಯದಲ್ಲಿ ಅಬ್ದುರ್ರಶೀದ್ ಸಖಾಫಿ ಪತ್ತಪಿರಿಯಂ ತರಗತಿ ಮಂಡಿಸಿದರು.
ರಾಜ್ಯ ಎಸ್.ಎಂ.ಎ. ಕೋಶಾಧಿಕಾರಿ ಮುಹಮ್ಮದ್ ಮನ್ಸೂರ್ ಕುಂದಾಪುರ ಕೋಡಿ, ಎಸ್.ಎಂ.ಎ. ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಬಶೀರ್ ಅಹ್ಮದ್ ಪಂಜಿಮೊಗರು, ಎಸ್.ಎಂ.ಎ. ದ.ಕ. ಈಸ್ಟ್ ಜಿಲ್ಲಾಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಎಸ್.ಜೆ.ಎಂ.ರಾಜ್ಯ ಕೋಶಾಧಿಕಾರಿ ಎಂ.ಕೆ.ಅಬ್ದುಲ್ ರಶೀದ್ ಸಖಾಫಿ ಮಜೂರು, ರಾಜ್ಯ ಉಪಾಧ್ಯಕ್ಷರಾದ ಕೆ.ಕೆ.ಎಂ.ಕಾಮಿಲ್ ಸಖಾಫಿ, ಪುಂಡೂರು ಇಬ್ರಾಹೀಂ ಸಖಾಫಿ, ರಾಜ್ಯ ನಾಯಕರಾದ ಒ.ಕೆ. ಸಈದ್ ಮುಸ್ಲಿಯಾರ್, ಸಮ್ಮೇಳನ ನಿರ್ವಹಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಎ.ಎಂ.ಇಸ್ಮಾಯೀಲ್ ಸಅದಿ ಉರುಮಣೆ, ತೋಟಾಲ್ ಮುಹಿಯುದ್ದೀನ್ ಸಅದಿ, ಮುಫತ್ತಿಶ್ ಹಾಫಿಲ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ಪಿ.ಎಂ.ಇಬ್ರಾಹೀಂ ನಈಮಿ, ಅಬ್ದುಲ್ ಅಝೀಝ್ ನೂರಾನಿ, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಪೀಣ್ಯ ಬಶೀರ್ ಸಅದಿ, ಅಡ್ಯಾರ್ ಪದವು ಇಸ್ಮಾಯೀಲ್ , ಎಸ್.ಎಂ.ಎ. ದ.ಕ. ಈಸ್ಟ್ ಜಿಲ್ಲಾ ಕೋಶಾಧಿಕಾರಿ ಲತೀಫ್ ಅರ್ಲಡ್ಕ ಇಬ್ರಾಹೀಂ ಖಲೀಲ್ ಮಾಲಿಕಿ, ಎಸ್.ವೈ.ಎಸ್. ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ, ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್, ಅಬ್ದುಲ್ಲಾ ಸಖಾಫಿ ಕೊಡಗು, ಅಬ್ಬಾಸ್ ನಿಝಾಮಿ ಬೆಂಗಳೂರು, ಹನೀಫ್ ಕಾಮಿಲ್ ಸಖಾಫಿ ಹಾಸನ, ಸೈಫುಲ್ಲಾ ಸಖಾಫಿ ಶಿವಮೊಗ್ಗ, ತಾಜುದ್ದೀನ್ ಫಾಲಿಲಿ, ಅಬ್ದುರ್ರಝಾಕ್ ಖಾಸಿಮಿ ಉಡುಪಿ, ಸಿರಾಜುದ್ದೀನ್ ಸಖಾಫಿ ಪೀಚಲಾರ್, ಇಬ್ರಾಹೀಂ ಸಖಾಫಿ ಕಬಕ, ಇಬ್ರಾಹಿಂ ಸಖಾಫಿ ಸೆರ್ಕಳ, ಅಶ್ರಫ್ ಇಂದಾದಿ, ನವಾಝ್ ಸಖಾಫಿ ಉಳ್ಳಾಲ, ಯೂನುಸ್ ಇಂದಾದಿ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಜೆ.ಎಂ.ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಮುಹಮ್ಮದ್ ಮದನಿ ಸ್ವಾಗತಿಸಿದರು. ಸಮ್ಮೇಳನ ನಿರ್ವಹಣಾ ಸಮಿತಿ ಕನ್ವೀನರ್ ಯಾಖೂಬ್ ಲತೀಫಿ ವಂದಿಸಿದರು.







