ಕಿಡ್ನಿ, ಅನ್ನನಾಳ, ಮಲದ್ವಾರ ಸಮಸ್ಯೆಯಿಂದ ಬಳಲುವ ತಂಝೀಮ್‌ಗೆ ನೆರವು ನೀಡಲು ಮನವಿ

ಕಾರವಾರ, ಅ.15: ಹುಟ್ಟಿನಿಂದಲೇ ಮಲದ್ವಾರ ಸಮಸ್ಯೆಯಿಂದ ಬಳಲುವುದರೊಂದಿಗೆ ಇದೀಗ ಕಿಡ್ನಿ ಮತ್ತು ಅನ್ನನಾಳ ಸಮಸ್ಯೆಗೆ ಒಳಗಾಗಿರುವ 10ರ ಹರೆಯದ ತಂಝೀಮ್ ಎಂಬ ಹೆಣ್ಮಗಳ ಹೆತ್ತವರು ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮುಹಮ್ಮದ್ ರಫೀಕ್ ವೃತ್ತಿಯಲ್ಲಿ ಚಾಲಕ. ಇವರಿಗೆ ಮೂವರು ಹೆಣ್ಮಕ್ಕಳು. ಕಿರಿಯ ಮಗಳು ತಂಝೀಮ್‌ಳಿಗೆ ಹುಟ್ಟಿನಿಂದಲೇ ಮಲದ್ವಾರ ಮುಚ್ಚಲ್ಪಟ್ಟಿತ್ತು. ಇದೀಗ ಅದರೊಂದಿಗೆ ಕಿಡ್ನಿ ಮತ್ತು ಅನ್ನನಾಳದ ಸಮಸ್ಯೆಯೂ ಇದೆ. ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಮಗಳನ್ನು ಆಗಾಗ ಕರೆತಂದು ಚಿಕಿತ್ಸೆ ಕೊಡಿಸುತ್ತಲಿದ್ದಾರೆ.
ಮುಹಮ್ಮದ್ ರಫೀಕ್ ಅವರು ಮಗಳ ಚಿಕಿತ್ಸೆಗಾಗಿ ಈವರೆಗೆ ಸುಮಾರು 5 ಲಕ್ಷ ರೂ. ಸಾಲ ಮಾಡಿದ್ದಾರೆ. ಒಂದು ರೋಗ ಶಮನವಾಗುತ್ತಲೇ ಇನ್ನೊಂದು ರೋಗ ಕಾಣಿಸಿಕೊಳ್ಳುತ್ತಿವೆ. ಇದರಿಂದ ಕಂಗೆಟ್ಟಿರುವ ರಫೀಕ್ ಕೆಲಸದ ಮಧ್ಯೆಯೂ ಮಗಳಿಗಾಗಿ ದಾನಿಗಳ ಬಳಿ ತೆರಳಿ ನೆರವು ಯಾಚಿಸುವುದು ಅನಿವಾರ್ಯವಾಗಿದೆ. ಜೊತೆಗೆ ಪತ್ನಿ ಮತ್ತು ಇತರ ಇಬ್ಬರು ಹೆಣ್ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ.
ತಂಝೀಮ್‌ಳಿಗೆ ನೆರವು ನೀಡಲು ನೀಡಲು ಬಯಸುವವರು ಬ್ಯಾಂಕ್ ಆಫ್ ಬರೋಡಾ ಇದರ ಶಿರಸಿ ಬ್ರಾಂಚ್‌ನ ಉಳಿತಾಯ ಖಾತೆ ಸಂಖ್ಯೆ 64560100007317 ( IFSC-BARB0VJSIUT) ಅಥವಾ ಫೋನ್‌ಪೇ ಸಂಖ್ಯೆ: 8861881906ಕ್ಕೆ ಧನ ಸಹಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ರಫೀಕ್ (ಮೊ.ಸಂ: 8861881906) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.







