ಜಮೀಯ್ಯತುಲ್ ಫಲಾಹ್ ಕಾರ್ಕಳ ಘಟಕ: ಪದಗ್ರಹಣ ಕಾರ್ಯಕ್ರಮ

ಕಾರ್ಕಳ : ಜಮೀಯತುಲ್ ಫಲಾಹ್ ಕಾರ್ಕಳ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಸಾಲ್ಮರದ ಜಾಮಿಯ ಮಸೀದಿ ವಾಣಿಜ್ಯ ಸಂಕೀರ್ಣದಲ್ಲಿರುವ ಜಮೀತುಲ್ ಫಲಾಹ್ ದ ಘಟಕದ ಕಾರ್ಯಾಲಯದಲ್ಲಿ ಜರುಗಿತು.
ಮಾಜಿ ಅಧ್ಯಕ್ಷರು ಹಾಗೂ ಕೇಂದ್ರಸಮಿತಿಯ ಅಧ್ಯಕ್ಷರಾದ ಅಶ್ಪಾಕ್ ಅಹಮದ್ ಕಾರ್ಕಳ ನೂತನ ಅಧ್ಯಕ್ಷರಾದ ಮೊಹಮ್ಮದ್ ಗೌಸ್ ರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಉಪಾಧ್ಯಕ್ಷರಾದ ಸೈಯದ್ ಅಬ್ಬಾಸ್ ಅಂಚಿಕಟ್ಟೆ, ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಜೊತೆ ಕಾರ್ಯದರ್ಶಿ ಶೇಕ್ ನಾಸಿರ್ ಬೈಲೂರು, ಸಂಘಟನಾ ಕಾರ್ಯದರ್ಶಿ ಸೈಯದ್ ಹಸನ್, ಮಾಜಿ ಉಪಾಧ್ಯಕ್ಷ ಸೈಯದ್ ಮೊಹಮ್ಮದ್ ಕಾಸಿಂ, ಮಾಜಿ ಕೋಶಧಿಕಾರಿ ಮೊಹಮ್ಮದ್ ಯಾಕೂಬ್ ಸಾಹೇಬ್, ಸದಸ್ಯರು ಉಪಸ್ಥಿತರಿದ್ದರು.
Next Story





