ನೂತನ ಆವಿಷ್ಕಾರಗಳಿಗೆ ಸಾಕ್ಷಿಯಾಗೋಣ; ಡಾ.ಎಸ್.ಡಿ. ಸುದರ್ಶನ್

ಕೊಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದ್ದು ಅದಕ್ಕೆ ಪೂರಕವಾಗಿ ನಾವು ಬೆಳೆಯಬೇಕಿದೆ. ಅವಕಾಶಗಳ ಸದ್ಭಳಕೆಯೊಂದಿಗೆ ಯುವ ಸಮುದಾಯ ನೂತನ ಆವಿಷ್ಕಾರಗಳಿಗೆ ಸಾಕ್ಷಿಯಾಗ ಬೇಕಿದೆ ಎಂದು ಬೆಂಗಳೂರಿನ ಸಿ.ಡಿಎಸಿ ಇದರ ಕಾರ್ಯಾಕಾರಿ ಅಧ್ಯಕ್ಷರಾದ ಡಾ.ಎಸ್.ಡಿ. ಸುದರ್ಶನ್ ಅವರು ಹೇಳಿದರು.
ಅವರು ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಶನಿವಾರ ನಡೆದ "ಅಂತರಾಷ್ಟ್ರೀಯ ಸಮ್ಮೇಳನ" 'ಐಈ ಈ ಈ ಇಂಟರ್ನ್ಯಾಷನಲ್ ಕಾನ್ಫರೆನ್ ಆನ್ ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್ , ವಿಎಲ್ಎಸ್ಐ , ಎಲೆಕ್ಟ್ರಿಕಲ್ಸರ್ಕ್ಯೂಟ್ಸ್ ಅಂಡ್ ರೋಬೋಟಿಕ್ಸ್ -ಐಈ ಈ ಈ ಡಿಸ್ಕವರ್ -2025' ಇದರ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕ್ಯಾಲಿಕಟ್ ನ ಎನ್ ಐಟಿಯ ಪ್ರಾಧ್ಯಾಪಕ ಡಾ.ಸಮೀರ್ ಎಸ್ ಎಂ ಅವರು ಸಮಾರೋಪ ಭಾಷಣ ಮಾಡುತ್ತಾ, ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಇಂದು ಹೆಚ್ಚೆಚ್ಚು ಅಂತರಾಷ್ಟ್ರೀಯ ಸಮ್ಮೇಳನಗಳು ನಡೆಯುತ್ತಿದ್ದು, ಮೌಲ್ಯಯುತ ಸಂಶೋಧನಾ ಪ್ರಬಂಧಗಳು ಕೂಡಾ ಮಂಡಿಸಲ್ಪಡುತ್ತಿವೆ. ಸುಮಾರು 40% ರಷ್ಡು ಕಾನ್ಪೆರೆನ್ಸ್ ಗಳು ನಡೆಯುತ್ತಿರುವುದು ಭಾರತ ಹಾಗೂ ಚೀನಾದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಪಿ.ಎ.ಶಿಕ್ಷಣ ಸಂಸ್ಥೆಯಲ್ಲಿ ನಡೆದ ಈ ಅಂತರಾಷ್ಟ್ರೀಯ ಸಮ್ಮೃಳನವು ಪ್ರಸ್ತುತ ಕಾಲಘಟ್ಟದ ಅಗತ್ಯಕ್ಕೆ ಪೂರಕವಾಗಿದ್ದು ಯುವ ಸಮುದಾಯಕ್ಕೆ ಅನೇಕ ಅವಕಾಶಗಳ ಕುರಿತು ಬೆಳಕುಚೆಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್‌ಎಮ್‌ಎಮ್‌ಐಟಿ ಪ್ರಾಧ್ಯಾಪಕ ಡಾ. ವಾಸುದೇವ ಆಚಾರ್ಯ ಅವರು ಉತ್ತಮ ಸಂಶೋ ಧನಾ ಪ್ರಬಂಧಗಳ ಮಂಡಿಸಿ ನಗದು ಪುರಸ್ಕಾರ ಪಡೆದ ಸಂಶೋಧಕರ ಹೆಸರು ವಾಚಿಸಿ ಅಭಿನಂಧಿಸಿದರು.
ಐಇಇಇ ಮಂಗಳೂರು ಉಪವಿಭಾಗದ ಅಧ್ಯಕ್ಷರಾದ ಡಾ. ಸತ್ಯನಾರಾಯಣ ಅವರು ‘ಡಿಸ್ಕವರ್ 2025’ ಸಮ್ಮೇಳನದ ಕುರಿತು ಮಾತನಾಡಿ, ಪಿ.ಎ.ಎಜ್ಯುಕೇಶನ್ ಸಂಸ್ಥೆಯ ಬೆಳ್ಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ವಿವಿಧ ತಜ್ಞರು, ಸಂಶೋಧಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವಿಕೆಯ ಮೂಲಕ ಈ ಅಂತರಾಷ್ಟ್ರೀಯ ಸಮ್ಮೇಳನವು ಯಶಸ್ವಿಯಾಗಿ ನಡೆದಿದೆ ಮತ್ತು ಹೊಸ ಆವಿಷ್ಕಾರದ ಅವಕಾಶಗಳನ್ನು ತೆರೆದಿದೆ ಎಂದರು.
ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಮೀಸ್ ಎಂ.ಕೆ. ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಿಎಡಿಸಿ ವಿಜ್ಞಾನಿ ಡಾ.ಮಹಮ್ಮದ್ ಮಿಸ್ಬಹುದ್ದೀನ್, ಪಿಎಇಟಿಯ ಪರ್ಚೆಸ್ ಮ್ಯಾನೇಜರ್ ಹಾರಿಸ್ ಟಿ.ಡಿ, ಕಾರ್ಯಕ್ರಮದ ಸಂಘಟಕರಾದ ಡಾ. ಜಾಕೀರ್ ಬೆಳ್ಳಾರಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ಡಾ.ಪಾಲಾಕ್ಷಪ್ಪ ಅವರು ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಡಾ. ಶರ್ಮಿಳಾ ಕುಮಾರಿ ವಂದಿಸಿದರು. ಪ್ರೊ. ಫಾತಿಮತ್ ರೈಹಾನ ಕಾರ್ಯಕ್ರಮ ನಿರೂಪಿಸಿದರು.







