ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲಿ: ಕಿಶೋರ್ ಶೆಟ್ಟಿ

ಮುಲ್ಕಿ : ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸ ಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ ಪ್ರೋತ್ಸಾಹ ಅಗತ್ಯ. ಕಲಾವಿದರಿಗೆ ತೊಂದರೆಯಾದಾಗ ಒಗ್ಗಟ್ಟಿನ ಧ್ವನಿಯಾಗಲು ಹಿಂದೆ ಮುಂದೆ ನೋಡುವುದು ಬೇಡ. ಒಕ್ಕೂಟ ಇನ್ನಷ್ಟು ವೃದ್ಧಿಸಬೇಕು. ಪೋಷಕರಿಂದ ಇದು ಸಾಧ್ಯವಾಗಲು ಸಾಧ್ಯ ಎಂದು ಮಂಗಳೂರು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಹೇಳಿದರು.
ಅವರು ಕದ್ರಿ ಲಯನ್ಸ್ ಅಶೋಕ ಭವನದಲ್ಲಿ ನಡೆದ ತುಳು ನಾಟಕ ಕಲಾವಿದರ ಒಕ್ಕೂಟದ ವಾರ್ಷಿಕ ಮಹಾಸಭೆ ಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸದಸ್ಯರಿಗೆ ಸಹಾಯ ಧನವನ್ನು ಹಸ್ತಾಂತರಿಸಲಾಯಿತು. ಹೆಚ್ಚುವರಿಯಾಗಿ ಕಾರ್ಯಕಾರಿ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ವಲಯದಲ್ಲಿನ ಸಂಘಟನೆಯ ಬಗ್ಗೆ ವಿಶೇಷವಾಗಿ ಚರ್ಚೆ ನಡೆಸಲಾಯಿತು.
ಒಕ್ಕೂಟದ ಉಪಾಧ್ಯಕ್ಷರುಗಳಾದ ತಾರನಾಥ ಶೆಟ್ಟಿ ಬೊಳಾರ, ಗೋಕುಲ್ ಕದ್ರಿ, ಕಲಾವಿದರ ಕ್ಷೇಮನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವಾ ಕದ್ರಿ, ಕೋಶಾಧಿಕಾರಿ ಮೋಹನ್ ಕೊಪ್ಪಲ ಕದ್ರಿ, ಸಂಘಟನಾ ಕಾರ್ಯದರ್ಶಿ ಮಧು ಬಂಗೇರ ಕಲ್ಲಡ್ಕ ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ತುಳಸೀದಾಸ್ ಉರ್ವ ವರದಿ ವಾಚಿಸಿದರು. ಪ್ರದೀಪ್ ಆಳ್ವಾ ಕದ್ರಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರ್ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು.







