ಬಂಟ್ವಾಳ: ಜಮೀಯ್ಯತುಲ್ ಫಲಾಹ್ ವತಿಯಿಂದ ಮೊಹಮ್ಮದ್ ಹಾಜಿ ಸಾಗರ್ ರಿಗೆ ಅಭಿನಂದನೆ

ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಮೊಹಮ್ಮದ್ ಹಾಜಿ ಸಾಗರ್ ಅವರನ್ನು ಅಭಿನಂದಿಸಲಾಯಿತು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕೋಶಾಧಿಕಾರಿ ಲತೀಫ್ ನೇರಳಕಟ್ಟೆ, ಕಾರ್ಯದರ್ಶಿ ಹಕೀಂ ಕಲಾಯಿ, ಪ್ರಮುಖರಾದ ಎಂ.ಎಚ್. ಇಕ್ಬಾಲ್ ಮೆಲ್ಕಾರ್, ಕೆ.ಕೆ.ಸಾಹುಲ್, ಪಿ.ಮಹಮ್ಮದ್, ಹಂಝ ಆನಿಯಾ ದರ್ಬಾರ್, ಬಿ.ಎಂ.ತುಂಬೆ ಮೊದಲಾದವರು ಉಪಸ್ಥಿತರಿದ್ದರು.
Next Story





