ಸುಳ್ಯದ ಚಾಂದಿನಿ ಮನವಿಗಳಿಗೆ ಸರಕಾರ ಸಂಪೂರ್ಣವಾಗಿ ಸ್ಪಂದಿಸಿದೆ. ದಿನೇಶ್ ಗುಂಡೂ ರಾವ್

ಮಂಗಳೂರು: ಅಪರೂಪದ ಕಾಯಿಲೆ ಹೊಂದಿದ್ದ ಚಾಂದಿನಿ ಸುಳ್ಯ ಅವರಿಗೆ ಸರಕಾರದ ಲಭ್ಯವಿರುವ ವ್ಯವಸ್ಥೆಯಲ್ಲಿ ಸಹಾಯ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಚಾಂದಿನಿ ಅವರು ನನ್ನ ಬಳಿ ಸಮಸ್ಯೆ ಹೇಳಿಕೊಂಡಾಗ ಸ್ವತಃ ನಾನು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ರೊಂದೊಂದಿಗೆ ಮಾತನಾಡಿ ತಜ್ಞ ವೈದ್ಯರಿಂದ ಅಗತ್ಯ ಚಿಕಿತ್ಸೆ ಒದಗಿಸಲು ಮನವಿ ಮಾಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣಕಾಸಿನ ನೆರವನ್ನು ಚಾಂದಿನಿ ಅವರು ಕೇಳಿದ್ದರು. ಈ ಕುರಿತಂತೆ ಸಿಎಂ ಅವರೊಂದಿಗೆ ಚರ್ಚಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ನೆರವು ನೀಡಲಾಗಿತ್ತು.
ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಎಸ್‌ಟಿ ಕಲ್ಯಾಣ ನಿಧಿಯಡಿ 9 ಲಕ್ಷ ಹಣವನ್ನು ಬಿಡುಗಡೆಗೊಳಿಸ ಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನ ಭರಿಸಿಲು 50 ಲಕ್ಷ ಹಣಕಾಸಿನ ನೆರವನ್ನು ಚಾಂದಿನಿಯವರಿಗೆ ಒದಗಿಸುವಂತೆ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿತ್ತು. ಚಾಂದಿನಿ ಸುಳ್ಯ ಅವರ ಮನವಿಗಳಿಗೆ ಸರಕಾರ ಸಂಪೂರ್ಣವಾಗಿ ಸ್ಪಂದಿಸಿದೆ. ಹೈಪರ್ ಐಜಿಇ ಸಿಂಡ್ರೋಮ್ ಎಂಬ ಅಪರೂಪದ ಮಾರಣಾಂತಿಕ ಕಾಯಿಲೆಗೆ ಚಾಂದಿನಿ ಅವರು ತುತ್ತಾಗಿದ್ದಾರೆ.
ಆರೋಗ್ಯ ಇಲಾಖೆಯ ಸಚಿವನಾಗಿ ನಮ್ಮ ಮೊದಲ ಆದ್ಯತೆ ರೋಗಗಳನ್ನ ತಡಗಟ್ಟುವುದು, ಜನಸಾಮಾನ್ಯರಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಒದಗಿಸುವುದು. ಉನ್ನತ ಮಟ್ಟದ ಚಿಕಿತ್ಸೆಗಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚು ಗಮನ ಹರಿಸುತ್ತದೆ. ಆದರೂ ನನ್ನ ಗಮನಕ್ಕೆ ಬಂದಾಗ ಸರ್ಕಾರದ ಇರುವ ವ್ಯವಸ್ಥೆಯಲ್ಲಿ ಏನೆಲ್ಲ ಸಹಾಯ ಮಾಡಲು ಸಾಧ್ಯ ಅದನ್ನು ಮಾಡಿದ್ದೇನೆ. ಎಂದು ಹೇಳಿದ್ದಾರೆ.







