ಮಂಗಳೂರು: ನದಿ ಕಿನಾರೆಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ

ಮಂಗಳೂರು: ನಗರದ ಬಂದರ್ ಹಳೆ ದಕ್ಕೆಯ ಪರ್ಶಿಯನ್ ಬೋಟ್ ನಿಲ್ಲುವ ಯಾರ್ಡ್‌ನ ನದಿ ಕಿನಾರೆಯಲ್ಲಿ ಸುಮಾರು 25ರಿಂದ 30 ವರ್ಷ ಪ್ರಾಯದ ಅಪರಿಚಿತ ಯುವಕನ ಮೃತದೇಹ ಬುಧವಾರ ಪತ್ತೆಯಾಗಿದೆ.
ಸುಮಾರು 5.4 ಅಡಿ ಎತ್ತರದ, ಗೋಧಿ ಮೈಬಣ್ಣದ, ದುಂಡು ಮುಖದ, ಸಾಧಾರಣ ಶರೀರ ಹೊಂದಿರುವ ಈ ಯುವಕನ ಕೊಳೆತ ಮೃತದೇಹವು ನದಿಯಲ್ಲಿ ತೇಲುತ್ತಿತ್ತು. ಬಳಿಕ ಈ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವಾರಸುದಾರರು ಇದ್ದಲ್ಲಿ ಠಾಣೆಯನ್ನು (0824-2220800) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





