ಉಳ್ಳಾಲ ತಾಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ

ಕೊಣಾಜೆ,ಅ.26: ಉಳ್ಳಾಲ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವು ಮಂಗಳ ಗಂಗೋತ್ರಿ ಕ್ರೀಡಾಂಗಣದಲ್ಲಿ ಶನಿವಾರ ಜರಗಿತು. ಸೈಂಟ್ ಸೆಬಾಸ್ಟಿಯನ್ ಪಿಯು ಕಾಲೇಜಿನ ಬಾಲಕರ ತಂಡ ಮತ್ತು ಪರಿಜ್ಞಾನ ಪಿಯು ಕಾಲೇಜಿನ ಬಾಲಕಿಯರ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿತು.
ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ಕಾರ್ಕಳ ಕಾರ್ಯಕ್ರಮ ಉದ್ಘಾಟಿಸಿ ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಹನೀಫ್, ಕೋಶಾಧಿಕಾರಿ ಅಬ್ದುನ್ನಾಸಿರ್ ಕೆ.ಕೆ, ನಿಕಟ ಪೂರ್ವ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಉಪಾಧ್ಯಕ್ಷ ಮೊಯ್ದಿನ್ ಅಹ್ಮದ್ ಸಾಹೇಬ್, ಜಮೀಯ್ಯತುಲ್ ಫಲಾಹ್ ಉಳ್ಳಾಲ ತಾಲೂಕು ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ತಾಲೂಕು ಕ್ರೀಡಾ ಸಂಯೋಜಕ ಮುಹಮ್ಮದ್ ಅಶ್ರಫ್, ಅನ್ವರ್ ಹುಸೈನ್ ಗೂಡಿನಬಳಿ, ಸಂಸ್ಥೆಯ ಆಡಳಿತಾಧಿಕಾರಿ ಜಮಾಲುದ್ದಿನ್, ಗ್ರೀನ್ ವ್ಯೆ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಮುಹಮ್ಮದ್ ಅಶ್ರಫ್ ಎಂ.ಕೆ. ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ಪರ್ವೇಝ್ ಅಲಿ ಸ್ವಾಗತಿಸಿದರು. ಪ್ರಾಂಶುಪಾಲ ಅಬೂಬಕ್ಕರ್ ಕೆ. ವಂದಿಸಿದರು. ಸಹ ಶಿಕ್ಷಕಿ ರೆನಿಟಾ ಡಿಕುನ್ಹ ಕಾರ್ಯಕ್ರಮ ನಿರೂಪಿಸಿದರು.





