ಇನಾಯತ್ ಅಲಿ ನೇತೃತ್ವದಲ್ಲಿ ಸೌಹಾರ್ದ ದೀಪಾವಳಿ ಆಚರಣೆ

ಸುರತ್ಕಲ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಇನಾಯತ್ ಅಲಿಅಭಿಮಾನಿ ಬಳಗ ಕೋಡಿಕಲ್ ವತಿಯಿಂದಸೌಹಾರ್ದ ದೀಪಾವಳಿ ಕಾರ್ಯಕ್ರಮವು ರವಿವಾರ ಕೋಡಿಕಲ್‌ನಲ್ಲಿ ನಡೆಯಿತು.
ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಅವರು, ಭಾರತ ವೈವಿದ್ಯಮಯ ಸಂಸ್ಕೃತಿಗಳನ್ನು ಹೊಂದಿರುವ ದೇಶ.ಈ ವೈವಿಧ್ಯಮಯ ಭಾರತವನ್ನು ಇನಾಯತ್ ಅಲಿ ಅವರು ಸೌಹಾರ್ದ ದೀಪಾವಳಿ ಕಾರ್ಯಕ್ರಮ ಎಲ್ಲಾ ಜಾತಿ ಧರ್ಮಗಳನ್ನು ಒಂದುಗೂಡಿಸುವ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ಈ ಮೂಲಕ ಅವರು ದೇವರ ಮಗನಾಗಿದ್ದಾರೆ ಎಂದರು.
ಮನುಷ್ಯರಿಗೆ ಸೌಹಾರ್ದಯುತ ಬದುಕು ಬೇಕಾಗಿದೆ.ಉತ್ತಮಸ್ವಾಥ್ಯ ಜೀವನಕ್ಕೆ ಇಂತಹಾ ಕಾರ್ಯಕ್ರಮ ಪ್ರೇರಣೆ. ಮುಂದಿನ ದಿನಗಳಲ್ಲಿ ಸರ್ವರನ್ನೂ ಒಗ್ಗೂಡಿಸುವ ಇನ್ನಷ್ಟು ಹೌಹಾರ್ದ ಹಬ್ಬಗಳು ನಡೆದು ಸೌಹಾರ್ದಯುತ ಬದುಕು ಕಾಣುವಂತಾಗಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ದೀಪಾವಳಿ ಕೇವಲ ದೀಪಗಳನ್ನು ಬೆಳಗಿ ಕತ್ತಲೆ ದೂರಮಾಡುವ ಹಬ್ಬವಲ್ಲ. ಇದು ಜಾತಿ, ಧರ್ಮ, ಮತ, ಪಂಗಡ, ಪಕ್ಷ ಇವೆಲ್ಲವನ್ನು ಮೀರಿ ಕೇವಲ ಮನಸ್ಸು ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬವಾಗಿದೆ. ದೀಪಾವಳಿ ದುಷ್ಟತನವನ್ನು ಅಳಿಸಿ ಶಿಷ್ಟತನವನ್ನು ಬೆಳೆಸುವ ಹಬ್ಬವಾಗಿದೆ. ಎಲ್ಲಾ ಹಬ್ಬಗಳನ್ನು ಸೌಹಾರ್ದದಿಂದ ಎಲ್ಲರೂ ಒಗ್ಗೂಡಿಕೊಂಡು ಆಚರಿಸು ವುದಾಗಿದೆ ಪ್ರಜಾಪ್ರಭುತ್ವ ಭಾರತ ದೇಶದ ಸೌದರ್ಯ ಎಂದು ನುಡಿದರು.
ಸಮಾರಂಭದಲ್ಲಿ ಹಲವು ಸ್ಥಳೀಯ ಅಶಕ್ತ ಕುಟುಂಬಗಳಿಗೆ ಇನಾಯತ್ ಅಲಿ ಅವರಐಆ್ಯಮ್ ಪೌಂಡೇಶನ್ ವತಿ ಯಿಂದ ಸಹಾಯಧನ ವಿತರಿಸಲಾಯಿತು. ಅಲ್ಲದೆ, ಸ್ಕೇಟಿಂಗ್ ನಲ್ಲಿ ಸಾಧನೆಗೈದ ಇಬ್ಬರು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಬಿಲ್ಲವ ಮಹಾ ಮಂಡಲದ ನೂತನಅಧ್ಯಕ್ಷಸೂರ್ಯಕಾಂತ್, ಕೋಡಿಕಲ್ ಜುಮಾ ಮಸೀದಿಯ ಖತೀಬ್ ಮರ್ಝೂಕ್ ಝುಹರಿ ಮಾತನಾಡಿದರು. ವಕ್ಪ್ ಸಲಹಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಚಿತ್ರಾಪುರ, ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ, ಯೂತ್ ಕಾಂಗ್ರೆಸ್ ನಗಿರೀಶ್ ಆಳ್ವ, ಮುಖಂಡರಾದ ಪಧ್ಮನಾಭ, ಅಪ್ಪಿ, ಶಕುಂತಲಾ ಕಾಮತ್, ಸುರೇಂದ್ರಕಂಬಳಿ, ಪೃಥ್ವಿರಾಜ್ ಆರ್.ಕೆ., ಅನಿಲ್ಕುಮಾರ್, ಕೇಶವ ಸನಿಲ್, ಕೃಷ್ಣ ಅಮೀನ್, ಉಮೇಶ್ ದಂಡಕೇರಿ, ಭಾಷಾ ಗುರುಪುರ, ಜಯಲಕ್ಷ್ಮೀ, ಸಾರಿಕಾ ಪೂಜಾರಿ, ಶಶಿಕಲಾ ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.
ಸುರತ್ಕಲ್ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಧನ್ಯವಾದ ಸಮರ್ಪಿಸಿದರು. ಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







