ಐಟಾ ದಕ್ಷಿಣ ಕನ್ನಡ ವತಿಯಿಂದ ನಿವೃತ್ತ ಶಿಕ್ಷಕರಿಗೆ, ಸಾಧಕರಿಗೆ ಸನ್ಮಾನ

ಮಂಗಳೂರು: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ದಕ್ಷಿಣ ಕನ್ನಡ ಘಟಕದ ವತಿಯಿಂದ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲಿ ನಿವೃತ್ತ ಶಿಕ್ಷಕರಿಗೂ ಸಾಧಕರಿಗೂ ಸನ್ಮಾನ ಹಾಗೂ ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಹಂಝಾ ಯು.ಎನ್. ಉದ್ಘಾಟಿಸಿದರು.
ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮತ್ತು ಮನೋಶಾಸ್ತ್ರಜ್ಞ ಡಾ. ಸರ್ಫರಾಜ್ ಜೆ. ಹಾಶಿಂ ಅವರು “ಒತ್ತಡ ರಹಿತ ಶಿಕ್ಷಕ – ಉತ್ಸಾಹಭರಿತ ತರಗತಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಸರ್ಕಾರಿ ಪಿಯು ಕಾಲೇಜು, ಪುತ್ತೂರು ನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಅವರು “ತಂತ್ರಜ್ಞಾನ ಯುಗದಲ್ಲಿ ನೈತಿಕ ಶಿಕ್ಷಣದ ಅಗತ್ಯತೆ” ಎಂಬ ವಿಷಯದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಇಶ್ರತ್ ಯಾಸ್ಮಿನ್ ಮತ್ತು ಅಬ್ದುಲ್ ಮುಬಾರಕ್, ಸಾಧಕರಾದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಆದಂ ಮತ್ತು ರಾಜ್ಯ ಸ್ಕೌಟ್ ಪ್ರಶಸ್ತಿ ಪುರಸ್ಕೃತ ಬಿ. ಮೊಹಮ್ಮದ್ ತುಂಬೆ ಇವರನ್ನು ಸನ್ಮಾನಿಸಲಾ ಯಿತು. ಐಟಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಮುಹಮ್ಮದ್ ರಝಾ ಮಾನ್ವಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಹನೀಫ್ ಸ್ವಾಗತ ಭಾಷಣ ಮಾಡಿದರು. ಡಾ. ಮುಹಮ್ಮದ್ ಮುಬೀನ್ ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ನಿವೃತ್ತ ಶಿಕ್ಷಕರನ್ನೂ ಪ್ರಶಸ್ತಿ ಪುರಸ್ಕೃತರನ್ನೂ ಕೆ. ಎಂ. ಕೆ. ಮಂಜನಾಡಿ ಪರಿಚಯಿಸಿ ದರು. ನೂರುದ್ದೀನ್ ಕಿರಾಅತ್ ನೆರವೇರಿಸಿದರು. ಅಶೀರುದ್ದೀನ್ ಆಲಿಯಾ ನಿರೂಪಿಸಿದರು, ರಿಯಾಝ್ ಧನ್ಯವಾದ ಸಲ್ಲಿಸಿದರು.







