ಮನೆಯಿಂದ ನಗ-ನಗದು ಕಳವು: ದೂರು ದಾಖಲು

ಮಂಗಳೂರು, ಅ.28: ತಲಪಾಡಿ ಗ್ರಾಮದ ಕೆ.ಸಿ ರೋಡ್ ಎಂಬಲ್ಲಿನ ಮನೆಯೊಂದರ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯಿಂದ ಸಹಸ್ರಾರು ಮೌಲ್ಯದ ಚಿನ್ನಾಭರಣ ಮತ್ತು ನನದನ್ನು ಕಳವುಗೈದ ಘಟನೆ ವರದಿಯಾಗಿದೆ.
ಮನೆ ಮಾಲಕಿ ವಿಮಲ ಎಂಬವರು ಅ.25ರಂದು ಮಧ್ಯಾಹ್ನ 3-00 ಗಂಟೆಗೆ ಮನೆಗೆ ಬೀಗ ಹಾಕಿ ಕೂಳೂರು ಪಂಜಿಮೊಗರು ಎಂಬಲ್ಲಿರುವ ಅಣ್ಣನ ಮನೆಗೆ ಹೋಗಿ, ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಅ.26ರಂದು ಸಂಜೆ 7:00 ಗಂಟೆಗೆ ಮನೆಗೆ ವಾಪಾಸ್ ಬಂದಾಗ ಕಳ್ಳತನ ಪ್ರಕರಣ ಬಂತು ಎನ್ನಲಾಗಿದೆ.
ಮನೆಯ ಟಿ.ವಿ ಶೋಕೇಸ್‌ನ ಮೇಲಿದ್ದ ಇಟ್ಟಿದ್ದ ಪೆಟ್ಟಿಗೆಯ ಬೀಗವನ್ನು ಮುರಿದು, ಅದರಲ್ಲಿದ್ದ ಕಲ್ಲುರ್ಟಿ ದೈವದ ಕರಿಮಣಿ ಸರ ಮತ್ತು ಕಪಾಟಿನ ಲಾಕ್‌ನ್ನು ಮುರಿದು ಅದರಲ್ಲಿದ್ದ ರೂಪಾಯಿ 10,000 ರೂ. ನಗದನ್ನು ಕಳ್ಳರು ಕಳವು ಮಾಡಿದ್ದಾರೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ಸುಮಾರು 80,000 ರೂ. ಎಂದು ವಿಮಲ ಎಂಬವರು ಉಳ್ಳಾಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story





