ಬ್ಯಾರಿಕೇಡ್‌ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು

ಹೆಬ್ರಿ, ಅ.29: ಬೈಕೊಂದು ರಸ್ತೆ ಬದಿಯಲ್ಲಿ ಇರಿಸಿದ್ದ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರೊಬ್ಬರು ಮೃತಪಟ್ಟ ಘಟನೆ ಮುದ್ರಾಡಿ ರಿಕ್ಷಾ ನಿಲ್ದಾಣ ಎದುರು ನಡೆದಿದೆ.
ಮೃತರನ್ನು ಮುದ್ರಾಡಿ ಗ್ರಾಮದ ಹರೀಶ(45) ಎಂದು ಗುರುತಿಸಲಾಗಿದೆ. ಅ.25ರಂದು ರಾತ್ರಿ ವೇಳೆ ಬಚ್ಪಪ್ಪು ಕಡೆಯಿಂದ ಮುದ್ರಾಡಿ ಕಡೆ ಹೋಗುತ್ತಿದ್ದ ಬೈಕ್, ರಸ್ತೆ ಬದಿಯಲ್ಲಿ ಇರಿಸಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಅ.27ರಂದು ರಾತ್ರಿ ಚಿಕಿತ್ಸೆ ಫಲಕಾರಿ ಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





