ಪಾಣೆಮಂಗಳೂರು: ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ನಾಪತ್ತೆ

ಬಂಟ್ವಾಳ : ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಹಳೆಯ ನೇತ್ರಾವತಿ ಸೇತುವೆ ಮೇಲೆ ಅಟೋ ರಿಕ್ಷಾ ನಿಲ್ಲಿಸಿ ಚಾಲಕ ನಾಪತ್ತೆಯಾದ ಘಟನೆ ಬುಧವಾರ ನಡೆದಿದೆ.
ಮೆಲ್ಕಾರು ಸಮೀಪದ ಮಾರ್ನಬೈಲು ನಿವಾಸಿ ಪೀಟರ್ ಲೋಬೋ (50) ಎಂಬವರೇ ನಾಪತ್ತೆಯಾದ ವ್ಯಕ್ತಿ ಎನ್ನಲಾಗುತ್ತಿದೆ.
ಸೇತುವೆಯ ಮೇಲೆ ಅಟೋ ರಿಕ್ಷಾ ನೋಡಿದ ಸ್ಥಳೀಯರು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದು, ಸ್ಥಳೀಯ ಈಜುಪಟು ಯುವಕರಾದ ಮುಹಮ್ಮದ್ ಮಮ್ಮು ಗೂಡಿನಬಳಿ, ಹನೀಫ್ ಅಕ್ಕರಂಗಡಿ, ನಿಸಾರ್ ಎಂ.ಕೆ ಹಾಗೂ ಇಬ್ರಾಹಿಂ ಎಂ.ಕೆ ಅವರ ನೇತೃತ್ವದ ತಂಡ ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ನದಿಯಲ್ಲಿ ಶೋಧ ಕಾರ್ಯವನ್ನೂ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ ಬುಧವಾರ ಸಂಜೆವರೆಗೂ ಚಾಲಕನ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ತಿಳಿದು ಬಂದಿದೆ.
Next Story





