ಬಂಟ್ವಾಳ: ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಿಯಾಝ್ ಹುಸೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಯಮಾನಿ ಹಾಗೂ ಶಾಲಾ ಮುಖ್ಯ ಶಿಕ್ಷಕ ಇಬ್ರಾಹಿಂ ಸಲೀಂ ಪಿ ರವರು ಕನ್ನಡ ರಾಜ್ಯೋತ್ಸವದ ರಾಜ್ಯೋತ್ಸವದ ಸಂದೇಶ ನೀಡಿದರು.
ಮದರಸ ಮುಖ್ಯ ಶಿಕ್ಷಕ ಮಜೀದ್ ಪೈಝಿ ಮಾತನಾಡಿ, ಶಾಂತಿ ಸೌಹಾರ್ದತೆಯ ಕನ್ನಡ ನಾಡಿನ ಪರಂಪರೆಯನ್ನು ಉಳಿಸಿ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಣಿಯಾ ಗುವಂತೆ ರಾಜ್ಯ ತರಬೇತುದಾರ, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಆಡಳಿತ ಮಂಡಳಿ ಸದಸ್ಯರಾದ ಉಬೈದುಲ್ಲಾ, ಹಾರೂನ್ ರಶೀದ್, ಶಾಲಾ ಬೋಧಕ, ಬೋಧಕೇತರ ವೃಂದ , ಪೋಷಕವರ್ಗ ಹಾಗೂ ತೌಹೀದ್ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭ ವಿದ್ಯಾರ್ಥಿಗಳು ಕನ್ನಡ ನಾಡಿನ ಸೊಬಗನ್ನು ಸಾಮೂಹಿಕ ಗೀತೆ ಹಾಗೂ ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಸಹ ಶಿಕ್ಷಕಿಯರಾದ ನಿಶ್ಮಿತಾ ಕುಮಾರಿ ಹಾಗೂ ಪ್ರಿಯಾಂಕ ಗಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ಕು.ಫಾತೀಮ ಶಮ್ರಾ ಸ್ವಾಗತಿಸಿ, ಕು.ರಿಫ್ಕಾ ಫಾತೀಮ ವಂದಿಸಿದರು. ಆಯಿಷಾ ಕಾರ್ಯಕ್ರಮ ನಿರೂಪಿಸಿದರು.







