ಮೆಸ್ಕಾಂ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಮಂಗಳೂರು: ನಗರದ ಮೆಸ್ಕಾಂ ಕಾಪೊ9ರೇಟ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ರಾಜ್ಯೋತ್ಸವ ಸಂದೇಶ ನೀಡಿದ ಮೆಸ್ಕಾಂ ತಾಂತ್ರಿಕ ನಿರ್ದೇಶಕರಾದ ಹರೀಶ್ ಕುಮಾರ್ ಅವರು ಭವ್ಯ ಇತಿಹಾಸ , ಪರಂಪರೆ ಹೊಂದಿರುವ ತಾಯಿ ಭಾಷೆ ಕನ್ನಡವನ್ನು ಎಂದೂ ಮರೆಯಬಾರದು. ಕನ್ನಡ ಭಾಷೆಗೆ ದೈನಂದಿನ ಆಡಳಿತ ವ್ಯವಹಾರದಲ್ಲಿ ಅದ್ಯತೆ ನೀಡುವ ಮೂಲಕ ಕನ್ನಡಾಂಬೆಯ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯವನ್ನು ಮಾಡಬೇಕು. ಕನ್ನಡ ಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ನಮ್ಮ ಕೊಡುಗೆ ನೀಡಬೇಕು ಎಂದರು.
ಮುಖ್ಯ ಆರ್ಥಿಕ ಅಧಿಕಾರಿಗಳಾದ ಮುರಳೀಧರ ನಾಯಕ್, ಪ್ರಧಾನ ವ್ಯವಸ್ಥಾಪಕರಾದ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿಗಳಾದ ನವೀನ್ ಕುಮಾರ್ , ತೇಜಸ್ವಿ, ನಿತೇಶ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು, ಉಪಸ್ಥಿತರಿದ್ದರು.
ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪುಷ್ಪರಾಜ್ ಅವರು ಸ್ವಾಗತಿಸಿದರು.ಕಂಪೆನಿ ಕಾರ್ಯದರ್ಶಿ ಪ್ರಭಾತ್ ಜೋಶಿ ಅವರು ವಂದಿಸಿದರು. ಮೆಸ್ಕಾಂ ಸಾರ್ವಜನಿಕ ಸಂಪರ್ಕ ಅಧಿಕಾರಿ ವಸಂತ ಶೆಟ್ಟಿ ಅವರು ನಿರೂಪಿಸಿದರು.
ಮೆಸ್ಕಾಂ ಬಳಗದಿಂದ ಕನ್ನಡ ಭಾಷೆ,ನೆಲದ ಹಿರಿಮೆಯನ್ನು ಸಾರುವ ಗೀತ ಗಾಯನ ಜರಗಿತು.







