ಎಸ್ ವೈ ಎಸ್ ದ.ಕ. ಈಸ್ಟ್ ಜಿಲ್ಲಾ ಸಾಂತ್ವನ -ಇಸಾಬದಿಂದ 'ರಿಫ್ಅ' ಫಿಸಿಕಲ್ ತರಬೇತಿ ಶಿಬಿರ

ಪುತ್ತೂರು: ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಕರ್ನಾಟಕ ಇದರ ದ.ಕ. ಈಸ್ಟ್ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಾಂತ್ವನ-ಇಸಾಬ ಸನ್ನದ್ಧ ತಂಡದ 'ರಿಫ್ಅ' ಎಂಬ ಹೆಸರಿನ ವಿಶೇಷ ಫಿಸಿಕಲ್ ತರಬೇತಿ ಶಿಬಿರ ಗುರುವಾರ ಗೂನಡ್ಕ ಮುಹಮ್ಮದ್ ಕುಂಞಿ ಎಸ್ಟೇಟ್ ನಲ್ಲಿ ನಡೆಯಿತು.
ಶಿಬಿರವನ್ನು ಸುಳ್ಯ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಉದ್ಘಾಟಿಸಿದರು. ಈಸ್ಟ್ ಜಿಲ್ಲಾ ಸಾಂತ್ವನ -ಇಸಾಬ ಉಪಾಧ್ಯಕ್ಷ ಉಸ್ಮಾನ್ ಸೋಕಿಲ ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿಯವರ ಆಧ್ಯಾತ್ಮಿಕ ತರಗತಿಯೊಂದಿಗೆ ಆರಂಭವಾದ ಶಿಬಿರದಲ್ಲಿ ಮಯ್ಯಿತ್ ಪರಿಪಾಲನೆ ತರಗತಿ ಅಬೂ ಶಝ ಅಬ್ದುರ್ರಝಾಕ್ ಖಾಸಿಮಿ ಕೂರ್ನಡ್ಕ ಹಾಗೂ ತುರ್ತು ಸಂದರ್ಭದ ಪ್ರಾಥಮಿಕ ಜಾಗೃತಿಯ ತರಗತಿಯನ್ನು ಡಾ.ಫಾರೂಕು ಕರ್ವೇಲು ನಿರ್ವಹಿಸಿದರು.
ಅಪಘಾತ ಸ್ಥಳದಲ್ಲಿ ತ್ವರಿತ ಅಂಬ್ಯುಲೆನ್ಸ್ ಸೇವೆ,ನೀರಲ್ಲಿ ಮುಳುಗಿದವರ ರಕ್ಷಣೆ ಮುಂತಾದುವುಗಳ ಕುರಿತು ವಿಶೇಷ ತರಬೇತಿ ಎಸ್ ವೈ ಎಸ್ ಜಿಲ್ಲಾ ನಾಯಕ ಸಿದ್ದೀಕ್ ಗೂನಡ್ಕ ನೇತೃತ್ವದಲ್ಲಿ ನಡೆಸಿಕೊಡಲಾಯಿತು. ಇದೇವೇಳೆ ಮುಹಮ್ಮದ್ ಕುಂಞಿ ಕುಂಬಕ್ಕೋಡು ರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮತ್ತೋರ್ವ ಜಿಲ್ಲಾ ನಾಯಕರಾದ ಜಮಾಲ್ ಲತೀಫಿ ನೇತೃತ್ವದಲ್ಲಿ ಬದ್ರಿಯತ್ ಮಜ್ಲಿಸ್ ನೊಂದಿಗೆ ಶಿಬಿರಕ್ಕೆ ಅಧಿಕೃತ ಚಾಲನೆ ದೊರಕಿತು. ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ಸಮಾರೋಪ ಭಾಷಣ ಮಾಡಿದರು.
ಜಿಲ್ಲಾ ಸಮಿತಿಯ ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ರಾಜ್ಯ ಸಮಿತಿ ಸದಸ್ಯ ಹಮೀದ್ ಕೊಯಿಲ, ಜಿಲ್ಲಾ ನಾಯಕರಾದ ಅಬ್ದುರ್ರಹ್ಮಾನ್ ಶರಫಿ, ವಿಟ್ಲ ಝೋನ್ ಅಧ್ಯಕ್ಷ ಅಬ್ದುರ್ರಹೀಮ್ ಸಖಾಫಿ ವಿಟ್ಲ, ಸುಳ್ಯ ಝೋನ್ ಉಪಾಧ್ಯಕ್ಷ ಫೈಸಲ್ ಝುಹ್ರಿ ಹಾಗೂ ಆರು ಝೋನ್ ಗಳಿಂದ ಆಯ್ದ ಸನ್ನದ್ಧ ತಂಡದ ಸದಸ್ಯರು ಉಪಸ್ಥಿತರಿದ್ದರು
ಜಿಲ್ಲಾ ಸಾಂತ್ವನ- ಇಸಾಬ ಕಾರ್ಯದರ್ಶಿ ಸಲೀಂ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು.







