ಎಸ್ ಜೆಎಂ ದ.ಕ. ಸೌತ್ ಜಿಲ್ಲಾ ಮುಅಲ್ಲಿಮ್ ಮೆಹರ್ಜಾನ್: ಮುಡಿಪು ರೇಂಜ್ ಗೆ ಸಮಗ್ರ ಪ್ರಶಸ್ತಿ

ಬಂಟ್ವಾಳ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಸೌತ್ ಜಿಲ್ಲಾ ಮಟ್ಟದ ಮುಅಲ್ಲಿಮ್ ಮೆಹರ್ಜಾನ್ ಸ್ಪರ್ಧಾಕೂಟವು ಸುರಿಬೈಲು ದಾರುಲ್ ಅಶ್ಅರಿಯ್ಯ ಎಜ್ಯುಕೇಶನಲ್ ಸಂಸ್ಥೆಯಲ್ಲಿ ನಡೆಯಿತು.
ಶೈಖುನಾ ಸುರಿಬೈಲ್ ಉಸ್ತಾದರ ಮಖಾಂ ಝಿಯಾರತ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮ ಬೊಳ್ಮಾರ್ ಉಸ್ತಾದ್ ಉದ್ಘಾಟಿಸಿದರು.
ಮುಅಲ್ಲಿಮ್ ಮೆಹರ್ಜಾನ್ ಸಮಿತಿಯ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್ಜೆಎಂ ರಾಜ್ಯ ಉಪಾಧ್ಯಕ್ಷ ಮುಹಿಯುದ್ದೀನ್ ಸಅದಿ ತೋಟಾಲ್ ಮಾತನಾಡಿದರು.
ಜಿಲ್ಲಾ ಅಧ್ಯಕ್ಷ ಯಾಕೂಬ್ ಲತೀಫಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ, ಸುಲೈಮಾನ್ ಹಾಜಿ ನಾರ್ಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಎಂಎ ಸಿದ್ದೀಕ್ ಸಅದಿ ಅಲ್ ಫುರ್ಖಾನಿ, ಹೈದರ್ ಅಶ್ರಫಿ ಮತ್ತಿತರರು ಭಾಗವಹಿಸಿದ್ದರು.
ಕನ್ವೀನರ್ ಅಬ್ದುಲ್ ರಝ್ಝಾಕ್ ಸಅದಿ ಸ್ವಾಗತಿಸಿ, ಕೋಶಾಧಿಕಾರಿ ಅಕ್ಬರಲಿ ಮದನಿ ವಂದಿಸಿದರು.
ನಾಲ್ಕು ವೇದಿಕೆಗಳಲ್ಲಿ ಹೈಝೋನ್ ಮತ್ತು ಗ್ರೌಂಡ್ ಝೋನ್ ವಿಭಾಗಗಳಲ್ಲಿ 50ರಷ್ಟು ಸ್ಪರ್ಧೆಗಳು ನಡೆಯಿತು. ಜಿಲ್ಲೆಯ 12 ರೇಂಜ್ ಗಳಿಂದ 200ಕ್ಕಿಂತಲೂ ಅಧಿಕ ಮುಅಲ್ಲಿಮರು ಸ್ಪರ್ಧಾಳುಗಳಾಗಿ ಭಾಗವಹಿಸಿದ್ದರು.
ಹೈಝೋನ್ ವಿಭಾಗದಲ್ಲಿ ಮುಡಿಪು ರೇಂಜ್ ಮೊದಲನೇ ಸ್ಥಾನ, ಸಜಿಪ ರೇಂಜ್ ದ್ವಿತೀಯ ಮತ್ತು ಮೋಂಟುಗೋಳಿ ರೇಂಜ್ ತೃತೀಯ ಸ್ಥಾನಗಳನ್ನು ಪಡೆಯಿತು.
ಗ್ರೌಂಡ್ ಝೋನ್ ವಿಭಾಗದಲ್ಲಿ ಸಾಲೆತ್ತೂರು ರೇಂಜ್ ಪ್ರಥಮ ಮುಡಿಪು ದ್ವಿತೀಯ ಮತ್ತು ಸಜಿಪ ತೃತೀಯ ಸ್ಥಾನ ಗಳಿಸಿತು.







