ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ

ದೇರಳಕಟ್ಟೆ: ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ ಹಾಗೂ ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ ಕುನಿಲ್ ಸ್ಕೂಲ್ ಕ್ಯಾಂಪಸ್ ನಲ್ಲಿ ನಡೆಯಿತು.
ಕೊಣಾಜೆ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ನಾಗರಾಜ್ ಮಾದಕ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.
ರಕ್ಷಣಾ ವೇದಿಕೆಯ ಗೌರವಾದ್ಯಕ್ಷ ಪಿ,ಎಸ್.ಮೊಯ್ದಿನ್ ಕುಂಞಿ ಮಾತನಾಡಿದರು
ನಾಟೆಕಲ್ ನಾಗರಿಕ ರಕ್ಷಣ ವೇದಿಕೆಯ ಅಧ್ಯಕ್ಷ ಹಾಶಿಮ್ ಬಂಡಾಸಾಲೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇದೇವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಮೌಶಿರ್ ಅಹ್ಮದ್ ಸಾಮಾನಿಗೆ, ಉಪಾಧ್ಯಕ್ಷರಾಗಿ ಕುಂಞಿ ಮೋನು ನಾಟೆಕಲ್, ಇಕ್ಬಾಲ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಪಿ.ಎಸ್., ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಮೌಲವಿ, ಕೋಶಾಧಿಕಾರಿಯಾಗಿ ಗೌರವ ಸಲಹೆಗಾರರಾಗಿ ಹನೀಫ್ ಶೈನ್ , ಅಬೂಬಕರ್ ದೋಹಾ ಬಾಗ್ ಆಯ್ಕೆಯಾದರು.
Next Story





