ಪಲ್ಸ್ ಪೋಲಿಯೋ ಬಗ್ಗೆ ಮಸೀದಿಗಳಲ್ಲಿ ಜಾಗೃತಿ ಮೂಡಿಸಲು ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿ.21ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವು ಜರುಗಲಿರುವುದು. ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ 0-5 ವರ್ಷದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು.
ಈ ಕಾರ್ಯಕ್ರಮದ ಬಗ್ಗೆ ಮಸೀದಿಗಳಲ್ಲಿ, ಸಮುದಾಯದ ಮುಖಂಡರು, ಧಾರ್ಮಿಕ ಮುಖಂಡರುಗಳಿಗೆ ಅರಿವು ಮೂಡಿಸಿ ಲಸಿಕಾ ದಿನದಂದು ತಮ್ಮ ಸಮುದಾಯದ ಎಲ್ಲಾ 0-5 ವರ್ಷದ ಮಕ್ಕಳು ಲಸಿಕೆ ಪಡೆಯುವ ಸಲಹೆ ನೀಡುವಂತೆ ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





